You are currently viewing ಕನ್ನಡ ಕಹಳೆ

ಕನ್ನಡ ಕಹಳೆ

ಜಗದ ಶಾಶ್ವತ ಬೆರಗು ಬೆಳಕು ಕತ್ತಲೆಯಲ್ಲೂ
ಕಾಣುತ್ತಿದೆ ನಿನ್ನಯ ಥಳುಕು ಸ್ವಚ್ಛ ಮನದಲಿ
ಕನ್ನಡ ನೆಲದಲಿ ನವ ಹುರುಪಿನ ಗರಿ
ಮುಡಿದು ಬಾನಿನಲ್ಲಿ ಹಾರುತಿರಲಿ

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಇದುವೇ
ಕನ್ನಡ ತಾಯಿಗೆ ಸಂದ ಬಹುಮಾನ ಜ್ಞಾನಪೀಠ
ಪ್ರಶಸ್ತಿಯ ಹಿರಿಮೆ ಇಮ್ಮಡಿಗೊಂಡಿಹುದು
ಕನ್ನಡಾಂಬೆಯ ಮಹಿಮೆ

ಸಾಹಿತ್ಯ ಪರಂಪರೆಗೆ ಹೆಮ್ಮೆಯ ಗರಿ
ಮೊಳಗುತಿದೆ ನಪಿರಿ -ನಗಾರಿ
ಅರಸಿ ಬರುತಿರಲಿ ಸರ್ವಶ್ರೇಷ್ಠ ಪ್ರಶಸ್ತಿ
ಅನುರಣಿಸಲಿ ಸಾಹಿತ್ಯ ಮೌಲ್ಯಾನ್ವೇಷಣೆ ಕೀರ್ತಿ

ವಿಶ್ವ ನಕಾಶೆಯಲ್ಲಿ ಬೆಳಗಲಿ ಕನ್ನಡ ದೀಪ
ಕರುನಾಡ ಸಂಸ್ಕೃತಿಗೆ ತಟ್ಟದಿರಲಿ ಬೇರೆಯವರ
ಶಾಪ ಜಯಭೇರಿ ಘೋಷಿಸಲಿ ನೆಲ ಜಲ
ಭಾಷೆ ಬೆಡಗು ಬಿನ್ನಾಣ ಮೂಡಿಸಲಿ

ಕನ್ನಡ ರಾಜ್ಯೋತ್ಸವದ ಆಚರಣೆ ನವೆಂಬರ 1ಕ್ಕೆ ಮಾತ್ರ
ಸೀಮಿತವಾಗದಿರಲಿ ನಾವು ಕನ್ನಡಿಗರೆಂಬ ಅಭಿಮಾನ
ಹೆಮ್ಮೆಯಾಗಿರಲಿ ಮೊಳಗಲಿ ಕನ್ನಡದ ಕಹಳೆ
ಹೆಚ್ಚುತ್ತಿರಲಿ ಕನ್ನಡಾಭಿಮಾನದ ಕಳೆ

ಉಷಾ ನಾಯ್ಕ
ಶಿರಳಗಿ, ಸಿದ್ದಾಪುರ, ಉತ್ತರ ಕನ್ನಡ ಜಿಲ್ಲೆ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.