You are currently viewing ಕಲ್ಪನೆಯ ದಾರಿಯಲ್ಲಿ

ಕಲ್ಪನೆಯ ದಾರಿಯಲ್ಲಿ

ಮಿನು ಮಿನುಗು ತಾರೆ.. ನೀ
ಕಲ್ಪನೆಯ ದಾರಿಯಲಿ.. ನಾ
ಹೃದಯ ತುಂಬಾ ಪ್ರೀತಿ ನೀಡುವೆ.. ನಾ
ಬಾರೆ ಎದೆಗೆ ಇಳಿದು ಬಿಡು ಬಾರವಾಗದು ನನ್ನ ಮನ..!

ನಿನ್ನ ಮನದಾಸೆಯ ಹೇಳು ಬಿಡು..
ಕಾತುರದಲಿ ಕಾಯುತಿರುವೆ..!
ಕಣ್ಣ ಹಂಚ ಪ್ರೇಮದಲಿ ಹೃದಯ ತುಂಬಿ..
ನೀಡುವೆ ನಾ.. ಪ್ರೀತಿಯ.

ಮನದ ಕದವ ತಗೆದು
ಆಸೆಗಳ ಸಾಲಿನಲಿ ಇರಿಸು.. ನೀ
ಕಲ್ಪನೆಗೂ ಮಿತಿ ಮೀರಿ..
ಆಸೆಗಳ ಬುತ್ತಿ ಕಟ್ಟಿರುವೆನು.. ನಾ

ಅರೆ ಕ್ಷಣ ನೊಂದರು ನೀ..
ನಾ ತಾಳಲಾಗದು ನನ್ನಿ ಈ ಮನ.
ನನ್ನೆದೆಯ ಅರಸಿ ಬಂದೆ ನೀ
ಅ ಕಲ್ಪನೆಯ ಗುಂಗಲ್ಲಿ ಚೈತನ್ಯನಾಗಿರುವೆ ನಾ

ನನ್ನ ಎದೆಯ ಗೂಡಲ್ಲಿ ಬಚ್ಚಿಡುವೆ
ಎದೆಗೂ ಮಿಗಿಲಿಗೂ ಪ್ರೇಮಿಸುವೆ ನಾ..
ಅ ಕಲ್ಪನೆಗೂ ಮೀತಿ ಮಿರುತಿದೆ ಅನುರಾಗ
ಮುಂಜಾನೆ ಮುಸ್ಸಂಜೆ ಎನ್ನದೆ ಕಾಯುತಿದೆ ನನ್ನಿ ಈ ಮನ.

ಬಸವ.ವಿನಯ್(ವಿಪಿ)
ಹರವೆ, ಚಾಮರಾಜನಗರ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ