ಭಯಭೀತಿಗಳ ಬಿಟ್ಟು ಮೋಜು ಮಸ್ತಿಯ ಕಿಚ್ಚು
ಈ ಹುಚ್ಚು ಹುಡುಗರಿಗೆ ಜಲಪಾತವ ನೋಡಿ
ಕುಣಿದು ಕುಪ್ಪಳಿಸುವ ಆಸೆ
ಬಂಡೆಗಲ್ಲುಗಳಿಗೆ ಕೇಕೆ ಕೂಗುಗಳು ಕಿರುಚಾಟದ
ಜನಜಂಗುಳಿಯ ಮಾತುಗಳು ಹೊರಳಾಡುತ್ತಿದೆ ಮನದಾಸೆ
ಹರೆಯದ ಭಾವಗಳು ತಿಳಿ ನೀರಲಿ ತೇಲುತ್ತಾ ಕಹಿ
ಮಾತುಗಳ ಮರೆಯುತ್ತ ಗಲ್ಲಗಳ ಮೇಲೆ
ಅದೇನನೂ ಪಿಸಗೂಡುವಾಸೆ
ಮೀಸೆ ತಿರುವಿದಷ್ಟು ಆಸೆ ಈಡೇರದೆ
ಹೊಟ್ಟೆ ಹಸಿದಷ್ಟು ಹಣ್ಣು ದೊರೆಯದೆ
ಕಷ್ಟಕ್ಕೆ ಹೊಡೆದಾಟ ಈ ಕೆಲಸದಾಸೆ
ಡಾ.ಅ.ಬ.ಇಟಗಿ
ಬೆಳಗಾವಿ