You are currently viewing ಹೆಸರಾಯ್ತು ಮೈಸೂರು ಉಸಿರಾಗಲೀ ಕರ್ನಾಟಕ

ಹೆಸರಾಯ್ತು ಮೈಸೂರು ಉಸಿರಾಗಲೀ ಕರ್ನಾಟಕ

50 ರ ದಶಕದ ಕನ್ನಡಿಗರ ಮೈಸೂರು
ಇಂದಿನ ಕರ್ನಾಟಕದ ಕನ್ನಡಿಗರ ಸಂಭ್ರಮದ ಸೂರು
ಅಂದು ಹೆಸರಾಗಿತ್ತು ಸುಸ್ಕೃ೦ತಿಗೆ ಮೈಸೂರು
ಇಂದಿಗೂ ಕರ್ನಾಟಕ ನಾಮಕರಣ ಹೊತ್ತ ಪ್ರತಿಬಿಂಬದ ಸೂರು

ಸುವರ್ಣ ಕರ್ನಾಟಕ ಮರು ನಾಮಕರಣದ ಸುಸಂದರ್ಭ
ಅದುವೆ ಇಂದಿನ ರಾಜ್ಯೋತ್ಸವದ ಸಡಗರದ ಕಲರವ
ಮೊಳಗಲಿ ಮಾತೃ ಭಾಷೆಯ ಸರ್ವರಲ್ಲಿ ಸಂಪ್ರೀತಿ
ಇನ್ನೂ ಇರಲಿ ಒಗ್ಗಟ್ಟಿನ ಜನಾಂಗದ ಬಿಗಿಮುಷ್ಠಿ

ಹಿಂದು, ಕ್ರೈಸ್ತ, ಮುಸ್ಲಿಮರಿಗೊಂದೇ ಭ್ರಾತೃತ್ವದ ಈ ನೆಲ
ಬೌದ್ಧ, ಜೈನ, ಶಿಖ್, ಪಾರ್ಷಿಗಳಿಗೊಂದೇ ಶ್ರೀಗಂಧದ ವನ
ಕನ್ನಡ ಈ ನಾಡು ಸರ್ವಜನಾಂಗದ ಶಾಂತಿಯ ಬನ
ಕನ್ನಡಿಗರ ಧನಿ-ಧ್ವನಿಯಾಗಿರವ ನಮ್ಮೀ ಒಂದೇ ನೆಲ.

ಶಿವಶರಣರ ದಾಸರ ಚಂಪೂ ಕವಿಗಳ ನಾಡಿನ ಆಗರ
ವಿಶ್ವದ ಸರ್ವಭಾಷೆಗಳಿಗೆ ಅನುಕರಣದ ಸಾಗರ
ಅಜ್ಞಾನದ ಅಂಧಕಾರ ಬಿಡಿಸಿದ ಜ್ಞಾನಪೀಠಗಳ ಶಿಖರ
75 ವರ್ಷದಲ್ಲೂ 25ರ ಹರೆಯ ತುಂಬಿದ ಭಾವಸಾರ

ಸುವರ್ಣ ನಾಮಕರಣದ ಈ ಸಂದರ್ಭದಲ್ಲಿ
ರಾಜ್ಯೋತ್ಸವದ ಸಕಲ ಕನ್ನಡಿಗರಲಿ ಭಾವೈಕ್ಯತೆಯ ಮಂತ್ರ
ಮತ್ತೆ ಇರಲಿ ಬಹು ಭಾಷಾ ಬಾಂಧವ್ಯದ ದಿವ್ಯ ಮಂತ್ರ
ಮೊದಲ ಪ್ರೀತಿ ಇರಲಿ ಮಾತೃಭಾಷೆಯ ಕಬ್ಬಿಗರ ಕರುಳಲಿ

ಎಂದೆಂದಿಗೂ ಇರಲಿ ಹೃದಯ ಭಾಷೆ ಹೊಂಗನ್ನಡ
ಆ ಧರ್ಮ, ಈ ಧರ್ಮ, ಎನ್ನದೇ ಒಂದಾಗುವ ಚೆಂಗನ್ನಡ
ಕನ್ನಡವೇ ನಮ್ಮ ಧರ್ಮ ಎಂದಿರಲಿ ಮನೆ-ಮನಗಳಲಿ
ಚಿರಾಯುವಾಗಲೀ ರಾಜ್ಯೋತ್ಸವದ ಸಂಭ್ರಮ ಹುಕ್ಕೇರಿಯಲಿ.

ಪ್ರಕಾಶ ಬ. ಅವಲಕ್ಕಿ
ಅಧ್ಯಕ್ಷರು, ಹುಕ್ಕೇರಿ ತಾಲೂಕಾ ಕನ್ನಡ ಸಾಹಿತ್ಯಪರಿಷತ್ತು
ಹುಕ್ಕೇರಿ ಘಟಕ
ಮೋ.ನಂ. 9008908635


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.