You are currently viewing ಹನುಮನ ಜಾತ್ರೆ

ಹನುಮನ ಜಾತ್ರೆ

ಅಜ್ಜಾ ಬಂದಾನ ಕರಿಯಾಕ
ಅವ್ರೂರಿನ ಜಾತ್ರೇ ಮಾಡಾಕ
ಹನುಮನ ತೇರು ಎಳಿಯಾಕ
ಭಕ್ತಿಯಿಂದ ಅವಗ ಕೈ ಮುಗಿಬೇಕ

ಬಗೆ ಬಗೆ ಬಣ್ಣದ ಪಟಗಳು
ಹೂಗಳ ಸುಂದರ ಹಾರಗಳು
ಕಟ್ಟಿಗೆ ತೇರು ಸಿಂಗಾರ
ಒಟ್ಟಿಗೆ ಬಾಳು ಬಂಗಾರ

ಅಜ್ಜ ಕೊಡಿಸಿದ ಮಿಠಾಯಿ
ತಲೆಗೆ ಸಿಕ್ಕಿಸಿದ ತುರಾಯಿ
ಕೊಡಿಸಿದ ಬಗೆ ಬಗೆ ಆಟಿಕೆ
ಮಾಡಲಿಲ್ಲ ಬೂಟಾಟಿಕೆ

ತಿರುಗುವ ಚಕ್ರವ ಹತ್ತಿಸಿದ
ಬೆಂಡು ಬೆತ್ತಾಸ ಕೊಡಿಸಿದ
ಗೋಬಿ ಪಾನೀಪೂರಿ ತಿನ್ನಿಸಿದ
ಸುಂದರ ಬಳೆಗಳ ಕೊಡಿಸಿದ

ಊರನ್ನೆಲ್ಲಾ ಸುತ್ತಿದೆವು
ಜಾತ್ರೆ ಸಂಭ್ರಮ ನೋಡಿದೆವು
ಹಿರಿ ಹಿರಿ ಹಿರಿ ಹಿಗ್ಗಿದೆವು
ತಕ ತಕ ತಕ ತಕ ಕುಣಿದೆವು

ಕೊಟ್ರೇಶ ಜವಳಿ
ಹಿರೇವಡ್ಡಟ್ಟಿ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ



Leave a Reply