ಸಂಕ್ರಾಂತಿ (ತ್ರಿಪದಿ )
ಬೆಳ್ಳಿ ರಥವನ್ನೇರಿ ಹೊಸತಾಗಿ ಉದಯಿಸಿ ಅಚಲವೆಂಬಂತೆ ಕಂಡು|ನೇಸರನು ಬಂದಿಹನು ಹೊಂಬಣ್ಣವ ಹೊತ್ತು॥ ಸಗ್ಗದ ಸುಗ್ಗಿ ಹಿಗ್ಗು ತಂದಿಹುದು ಕುಗ್ಗಿದ ಮೊಗದಲ್ಲಿ| ಹೊಮ್ಮಿಹುದು ಬಂಗಾರ ಬೆಳೆಯ ಸಿರಿಯು॥ ಎಳ್ಳು ಬೆಲ್ಲವ ಬೀರಿ ಒಳ್ಳೊಳ್ಳೆಯ ಮಾತಾಡಿ ಹುಸಿಯ ನುಡಿಯ ದೂಡುತ|ನಾವೆಲ್ಲ ಚೆಂದದಿ ಒಳ್ಳೆಯತನದಲ್ಲಿ ಬದುಕೋಣ॥…