ಮನಸ್ಸು ಹಾರುವ ಹಕ್ಕಿ
ರೆಕ್ಕೆ ಪುಕ್ಕಗಳ ಗೊಡವೆ ಇಲ್ಲದೆಯೇ ಮತಿಯೆಂಬ ಮರದಲಿ ಗೂಡು ಕಟ್ಟಿ ಭಾವತರಂಗಗಳಲಿ ಗುರಿಗತಿ ತಪ್ಪುತ್ತ ಹಾರುತ್ತಿದೆ ಮನಸ್ಸೆಂಬ ಹಕ್ಕಿ ಹಾರುತ್ತಿದೆ ಕುಂತಲ್ಲೇ ಕೂರದೆ ನಿಂತಲ್ಲೆ ನಿಲ್ಲದೆಯೇ ದಿಗಂತದಾಚೆಗೆ ಬಾನು ಭುಮಿಯ ಮೆಟ್ಟಿ ನವಸಗಳ ಅರೆಬರೆಯಾಗಿ ಸವಿಯುತ್ತ ಹಾರುತ್ತಿದೆ ಮನಸ್ಸೆಂಬ ಹಕ್ಕಿ ಹಾರುತ್ತಿದೆ…