You are currently viewing ಚಂದನವನದ ಹಿರಿಯ ಮೇರುನಟ ದ್ವಾರಕೀಶ್

ಚಂದನವನದ ಹಿರಿಯ ಮೇರುನಟ ದ್ವಾರಕೀಶ್

ಶಮಾರಾವ್ ಮತ್ತು ಜಯಮ್ಮನವರ ಸುಪುತ್ರರು
19|8|1942|ರಲ್ಲಿ ಹುಣಸೂರಿನಲ್ಲಿ ಜನಿಸಿದವರು
ಮೆಕ್ಯಾನಿಕಲ್ ಇಂಜನಿಯರಿಂಗ್ ಪದವೀಧರರು
ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟರಿವರು

ಸಿಂಗಾಪುರದಲ್ಲಿ ರಾಜಾ ಕುಳ್ಳನೆಂದು ಪ್ರಸಿದ್ಧರಿವರು
ಖ್ಯಾತ ಹಾಸ್ಯನಟ ನಿರ್ಮಾಪಕ ನಿರ್ದೇಶಕರಿವರು
ಕನ್ನಡ ಚಿತ್ರರಂಗದಲ್ಲಿ ಗಣನೀಯ ಸೇವೆಸಲ್ಲಿಸಿದವರು
ಬೆಂಗಳೂರು ವಿಶ್ವವಿದ್ಯಾನಿಲಯದಿಂದ
ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಭಾಜನರಾದವರು

ಮುನ್ನೂರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದವರು
ಕನ್ನಡ ಚಿತ್ರರಂಗದ ಮೇರುನಟರೊಂದಿಗೆ ನಟಿಸಿ ಸೈ ಎನಿಸಿಕೊಂಡವರು
ನಲ್ವತ್ತಕ್ಕು ಹೆಚ್ಚು ಸಿನಿಮಾಗಳನ್ನು ನಿರ್ಮಿಸಿದವರು
ಕರುನಾಡ ಪ್ರಚಂಡ ಕುಳ್ಳನೆಂದು ಹೆಸರು ಗಳಿಸಿದವರು

ಅಪಾರ ಅಭಿಮಾನಿಗಳನ್ನು ಹೊಂದಿದ್ದ ಮೇರುನಟರು
ವಯೋಸಹಜವಾದ ಖಾಯಿಲೆಯಿಂದ ಬಳಲುತ್ತಿದ್ದರು
ಹೃದಯಾಘಾತದಿಂದ ಇಂದು ಇಹಲೋಕ ತ್ಯಜಿಸಿದರು
ಮರಳಿ ಬಾರದೂರಿಗೆ ಅಂತಿಮ ಪಯಣ ಬೆಳೆಸಿದರು
ಅಂತಿಮ ನಮನ ಸಲ್ಲಿಸುವ ಬನ್ನಿ ನಾವು ನೀವೆಲ್ಲರು

ಪೂರ್ಣಿಮಾ ರಾಜೇಶ್
ಬೆಂಗಳೂರು


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.