ನೋಡ ಬನ್ನಿ ಕರ್ನಾಟಕ ರಾಜ್ಯಕ್ಕೆ
ನಮ್ಮಯ ಈ ಕುಂತಲ ದೇಶಕ್ಕೆ
ಜಗಕೆ ಬೆರಗುಗೊಳಿಸುವ ಇತಿಹಾಸವು
ಇಲ್ಲಿದೆ ಪ್ರಾಚೀನ ಶಿಲಾ ಶಾಸನವು
ಹಲ್ಮಿಡಿ ಕನ್ನಡದ ಮೊದಲ ಶಿಲಾ ಶಾಸನವದು
ಕವಿಗಳು ಲೇಖಕರು ಮಾಡಿದ ಸಾಧನೆಯದು
ಎಂಟು ಜ್ಞಾನಪೀಠ ಪ್ರಶಸ್ತಿಗಳು ಕನ್ನಡಕ್ಕೆ
ಕುವೆಂಪು ಬೇಂದ್ರೆ ಅಜ್ಜ ಇವರ ಸಾಹಿತ್ಯಕ್ಕೆ
ಇರುವುದು ಹಂಪಿ ಬಾದಾಮಿ ಬೇಲೂರು
ಇಲ್ಲಿ ಇರುವರು ಹಲವಾರು ಗಾಯಕರು
ಕಾವೇರಿ ಕೃಷ್ಣ ಹರಿಯುವ ನಾಡು
ಭುವನೇಶ್ವರಿಯ ಮಕ್ಕಳ ಬೀಡು
ಜೋಗ ಜಲಪಾತವು ಇಲ್ಲಿ ಇರುವುದು
ಶ್ರೀಗಂಧವು ಇಲ್ಲಿಯೇ ಬೆಳೆಯುವುದು
ನಮಗೆ ಸಗ್ಗವು ಇನ್ನೇಕೆ ಬೇಕು
ನಮ್ಮ ಈ ಸ್ವರ್ಗವೇ ನಮಗೆ ಸಾಕು
ಕುಮಾರಿ ಶ್ರದ್ಧಾ ದೀಪಕ ಸಾಮಂತ
9 ನೇ ತರಗತಿ, ಜನತಾ ವಿದ್ಯಾಲಯ ಪ್ರೌಢಶಾಲೆ
ದಾಂಡೇಲಿ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.