You are currently viewing ಬಸವ ಪ್ರಾರ್ಥನೆ

ಬಸವ ಪ್ರಾರ್ಥನೆ

ಈಶ್ವರ ಸರ್ವೇಶ್ವರ ಈಶ್ವರ ಬಸವೇಶ್ವರ

ದೇಹವೇ ದೇಗುಲ ಲಿಂಗವೇ ದೇವರು
ಅಂಗವೇ ಲಿಂಗವು ಲಿಂಗವೇ ಪ್ರಾಣವು

ಈಶ್ವರ ಸರ್ವೇಶ್ವರ ಈಶ್ವರ ಬಸವೇಶ್ವರ

ಕಾಯವೇ ಮಂದಿರ ಕಾಯಕವೇ ಕೈಲಾಸ
ಕಾರುಣ್ಯವೇ ಲಿಂಗಪೂಜೆ
ದಯವೇ ಧರ್ಮ ವು

ಈಶ್ವರ ಸರ್ವೇಶ್ವರ ಈಶ್ವರ ಬಸವೇಶ್ವರ

ನುಡಿದಂತೆ ನಡೆದರೆ ನಮ್ಮ ಜನ್ಮ ಪಾವನ
ನುಡಿಯೇ ಮುತ್ತಿನ ಹಾರ ಅದುವೆ ಶರಣಗೆ ಭೂಷಣ

ಈಶ್ವರ ಸರ್ವೇಶ್ವರ ಈಶ್ವರ ಬಸವೇಶ್ವರ

ಮನದ ಮುಂದಿನ ಆಸೆ ಬಿಟ್ಟರೇ ಸರ್ವಾಂಗವೇ ಸುಂದರ
ಏನು ಬಂದಿರಿ ಎಂದು ಕೇಳಲು
ಬದುಕೆ ಸುಂದರ ಹಂದರ

ಈಶ್ವರ ಸರ್ವೇಶ್ವರ ಈಶ್ವರ ಬಸವೇಶ್ವರ

ಆತ್ಮ ವೇ ಜಂಗಮ ಕಾಯವೇ ಸ್ಥಾವರ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ

ಈಶ್ವರ ಸರ್ವೇಶ್ವರ ಈಶ್ವರ ಬಸವೇಶ್ವರ

ಅಂತರಂಗವು ಶುದ್ದಿಯಾದರೆ
ಬಹಿರಂಗವು ಚೇತನ
ಶರಣ ಸತಿ ಲಿಂಗ ಪತಿ ಎಂದರೆ
ಬದುಕು ನಿತ್ಯ ನೂತನ

ಈಶ್ವರ ಸರ್ವೇಶ್ವರ ಈಶ್ವರ ಬಸವೇಶ್ವರ

ಕೊಟ್ರೇಶ ಜವಳಿ
ಹಿರೇವಡ್ಡಟ್ಟಿ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ



Leave a Reply