You are currently viewing ಬಸವ ಕಲ್ಯಾಣ

ಬಸವ ಕಲ್ಯಾಣ

ಶರಣ ಸಂಕುಲ!

ಅವರೇನು ದೇವ ಲೋಕದಿಂದ ಬಂದವರಲ್ಲ
ದೇವ ಲೋಕವೇ ಧರೆಗಿಳಿಸಿದವರು
ಶಿವ ಶರಣರು ಶಿವ ಭಕ್ತರು
ಶಿವಾನುಭವಿಗಳ ಶರಣ ಸಂಕುಲ

ಪ್ರಸಾದಿಕರಣ!

ಸತ್ಯ ಶುದ್ಧ ಕಾಯಕ ಪ್ರೇಮಿಗಳು
ಕಾಯಕದಲ್ಲಿ ಮೇಲು – ಕೀಳು ಎಣಿಸದವರು
ಉಪಜೀವನಕ್ಕೆ ಬೇಕಾಗುವಷ್ಟೆ ನಿತ್ಯ ಘಳಿಕೆ
ದಯೆ ದಾಸೋಹ ಕಾಯಕ ತತ್ವ – ಸಿದ್ಧಾಂತ

ಪರ್ಯಾಯ ವ್ಯವಸ್ಥೆ!

ಪ್ರಜಾಪ್ರಭುತ್ವದ ಪರಿಕಲ್ಪನೆಗೆ ಷರಾ
ಬರೆದವರು
ಅನುಭವ ಮಂಟಪ ಮೊದಲ ಸಂಸತ್ತು
ಸಮಾನತೆ ಸೌಹಾರ್ದತೆ ಸ್ತ್ರೀ ಸ್ವಾತಂತ್ರ್ಯ
ನೈತಿಕತೆ ವೈಚಾರಿಕತೆ ಮಾನವೀಯತೆಯ
ನೆಲೆಗಟ್ಟು

ಕನ್ನಡ ಭಾಷಾ ಚಳುವಳಿ !

ಸಂಸ್ಕೃತ ರಾಜ ಭಾಷೆಯಾಗಿ ಮೆರೆಯುವ
ಕಾಲ
ಅನ್ಯ ಭಾಷಿಗರಿಗೂ ಕನ್ನಡ ಕಲಿಸಿದರು
ವಚನ ಸಾಹಿತ್ಯಕ್ಕೆ ಕನ್ನಡ ಭಾಷೆ ಜೀವಾಳ
ವಚನ ಸಾಹಿತ್ಯದಿಂದಲೇ ಕನ್ನಡ ಭಾಷಾ
ಚಳುವಳಿ

ಕಲ್ಯಾಣ ಕ್ರಾಂತಿ!

ಬಿಜ್ಜಳನ ಅರಸೊತ್ತಿಗೆ ದುರಾಡಳಿತ
ಜಾತಿ – ಮತ ಪಂಥ ಭೇದಾಭೇದ ಬದಿಗಿಟ್ಟು
ಅಂತರ ಜಾತಿ ವಿವಾಹಕ್ಕೆ ಜಯ ಎಂದರು
ಶರಣರ ಮಾರಣ ಹೋಮ ಕಲ್ಯಾಣ ಕ್ರಾಂತಿ

ಬಸವ ಕಲ್ಯಾಣ!

ಶರಣು ಶರಣಾರ್ಥಿ ಕಲಿಸಿದ ಅಣ್ಣ
ಸಕಲ ಜೀವಾತ್ಮಗಳ ಲೇಸು ಬಯಸಿದ
ಬಸವಣ್ಣ

“ದಯವೇ ಧರ್ಮದ ಮೂಲ” ವೆಂದ
ಮಂತ್ರ ಪುರುಷ ಬಸವ ಗುರುವಿನ ‘ಬಸವ ಕಲ್ಯಾಣ’

ಗಣಪತಿ ಭೂರೆ
ಆನಂದವಾಡಿ
ಪೋಸ್ಟ್. ಭಾತಾಂಬ್ರ 585411
ತಾ. ಭಾಲ್ಕಿ ಜಿ. ಬೀದರ
ಮೋ.7353304510


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ


Leave a Reply