ಹೊನ್ನಪ್ಪ ಗಂಗಮ್ಮ ರ ವರಪುತ್ರ
ಉದ್ಧಾಮ ಶಿವಯೋಗಿಗಳ ಪಟ್ಟಶಿಷ್ಯ
ಆಂಗ್ಲ ಸಂಸ್ಕೃತ ಭಾಷಾ ಪ್ರವೀಣ
ಭಕ್ತರ ಆರಾಧ್ಯ ದೈವ ಶ್ರೀ ಶಿವಕುಮಾರರು
ಲಕ್ಷಾಂತರ ವಿದ್ಯಾರ್ಥಿಗಳ ಜ್ಞಾನ ದಾಸೋಹಿಯಾಗಿ
ಭಕ್ತರ ಹೃದಯದಲ್ಲಿ ಅರಿವಿನ ಜ್ಯೋತಿಯಾಗಿ
ಹಸಿದ ಉದರಗಳಿಗೆ ಅನ್ನಬ್ರಹ್ಮನಾಗಿ
ಬೆಳಗಿದರು ಎಲ್ಲರ ಮನೆಮನಗಳನು
ಜಾತಿಭೇದ ನೋಡದ ಸ್ವಾಮೀಜಿಯವರು
ಕಾಯಕವೇ ಕೈಲಾಸ ನಡೆನುಡಿಯಲ್ಲಿ ತೋರಿದವರು
ಸರ್ವಧರ್ಮ ಸಮನ್ವಯಿಯಾದವರು
ಇಷ್ಟಲಿಂಗ ಪೂಜಾಕಾರ್ಯನಿರತರು
ಕಾವಿಯುಡುಗೆಯಲ್ಲಿ ಘನತೆವೆತ್ತವರು
ಸದ್ದುಗದ್ದಲವಿಲ್ಲದೆ ಸೇವೆಗೈದವರು
ಭಕ್ತರ ಉದ್ಧಾರಕಾಗಿ ಕೈಲಾಸದಿಂದ ಇಳಿದವರು
ಸಿದ್ಧಗಂಗೆಯ ಸಿದ್ಧಪುರುಷರೆಂದೆನಿಸಿಹರಿವರು
ನಡೆದಾಡುವ ದೇವರೆಂದೆ ಖ್ಯಾತನಾಮರು
ಜನಮಾನಸದಲ್ಲಿ ಮಾಸದೇ ನೆಲೆನಿಂತವರು
ಶತಾಯುಷಿ ಪರಮಪೂಜ್ಯರು
ಶ್ರೀ ಶಿವಕುಮಾರ ಸ್ವಾಮೀಜಿಯವರು
ಎಲ್ ಎಸ್ ಆಶಾ ಶ್ರೀಧರ್
ಶಂಕರಘಟ್ಟ, ಶಿವಮೊಗ್ಗ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
-
- Add to basket
- ವಚನ ವಿಶ್ಲೇಷಣೆ
ವಚನ ಮಂದಾರ
- ₹100.00
-
- Sale! Add to basket
- ಕನ್ನಡ ಪುಸ್ತಕಗಳು (Kannada Books )
Manase Relax Please ಮನಸೇ ರಿಲ್ಯಾಕ್ಸ್ ಪ್ಲೀಸ್
- Original price was: ₹150.00.₹140.00Current price is: ₹140.00.

