You are currently viewing ಬಾಳಿಗೆ ಕನ್ನಡ ಬೆಳಕಾಗಲಿ

ಬಾಳಿಗೆ ಕನ್ನಡ ಬೆಳಕಾಗಲಿ

ಉಸಿರಿಗೆ ಆಸರೆ ಕನ್ನಡ
ಬದುಕಿಗೆ ಬೇಕು ಕನ್ನಡ
ಜೀವಿಸು ಕನ್ನಡ ನೆಲದಲ್ಲಿ
ಜಯಸು ಕನ್ನಡದ ಉಸಿರಲ್ಲಿ

ಬಾಳು ಬೆಳಕಾಗಲಿ ಕನ್ನಡಿಗನಾಗಿ
ಹೋರಾಟ ನಿನ್ನದು ಕನ್ನಡಕ್ಕಾಗಿ
ಬಿಟ್ಟುಕೊಡದಿರು ಎಂದೆಂದೂ ಕನ್ನಡವು
ಮೈ ಮನದಲ್ಲಿ ಮನಸಲ್ಲಿ ಕನ್ನಡವು

ಕಾಪಾಡು ಬೆಳೆಸು ಕನ್ನಡದ ರಥ
ಮರೆಯದಿರು ಎಂದೆಂದೂ ಕನ್ನಡದ ಗುಣ
ಕೈ ಚಾಚಿದಾಗ ಕೈಲಾಸ ಕನ್ನಡದ ರಿಣ
ತಲೆಯೆತ್ತಿ ಮೆರೆಯಲಿ ಸಂಸ್ಕೃತಿ ಕನ್ನಡ

ಬಾರಿಸಲಿ ಮನೆ ಮನಗಳಲ್ಲಿ ಕನ್ನಡ
ಸುವಾಸನೆ ಭರಿತ ಭಾಷೆ ಕನ್ನಡ
ಸರಳ ಸುಂದರ ಸ್ವಚಂದ ಕನ್ನಡ
ಶ್ರೇಷ್ಠ ಕವಿಗಳಾದರು ಕನ್ನಡದ ಕಣ್ಮಣಿಗಳು

ಓಂಕಾರದ ಸ್ವರವು ಕನ್ನಡದ್ದು ಕಂಡು
ಸಂತರು ಶರಣರು ಸಾರಿದರು ಕನ್ನಡದ ನುಡಿ
ಕನ್ನಡದ ಗತ್ತು ಕನ್ನಡಿಗರಿಗೆ ಗೊತ್ತು
ರಾಷ್ಟ್ರಮಟ್ಟದಲ್ಲಿ ಕನ್ನಡದ ಕೀರ್ತಿ ಗೊತ್ತು

ಮಹಾಂತೇಶ ಖೈನೂರ