ಕ್ರಾಂತಿಕಾರಿ ಬಸವಣ್ಣ
ಮೇಲು ಕೀಳೆಂಬುದ ತೊಡೆದ ಕ್ರಾಂತಿಕಾರಿ ಬಸವಣ್ಣ ಕಾಯಕವೇ ಕೈಲಾಸವೆಂದ ಭಕ್ತಿಭಂಡಾರಿ ಬಸವಣ್ಣ ಮಡಿಯುಟ್ಟು ಮಾಡುವ ಪೂಜೆಯೇ ಶ್ರೇಷ್ಠವಲ್ಲವೆಂದ ಕೈ ಕೆಸರು ಮಾಡುವ ಒಕ್ಕಲುತನ ಕನಿಷ್ಠವಲ್ಲವೆಂದ ದುಡಿಮೆಯಲ್ಲಿ ಸಮಬಾಳು ಇರಲೆಂದ ಗಳಿಕೆಯಲ್ಲಿ ಸಮಪಾಲು ಬೇಕೆಂದ ಪೂಜೆ ಆತ್ಮೋದ್ಧಾರದ ಮಂತ್ರವೆಂದ ಕಾಯಕ ದೇಶೋದ್ಧಾರದ ತಂತ್ರವೆಂದ…