You are currently viewing ಸಂಕ್ರಾಂತಿ (ತ್ರಿಪದಿ )

ಸಂಕ್ರಾಂತಿ (ತ್ರಿಪದಿ )

ಬೆಳ್ಳಿ ರಥವನ್ನೇರಿ ಹೊಸತಾಗಿ ಉದಯಿಸಿ
ಅಚಲವೆಂಬಂತೆ ಕಂಡು|ನೇಸರನು
ಬಂದಿಹನು ಹೊಂಬಣ್ಣವ ಹೊತ್ತು॥

ಸಗ್ಗದ ಸುಗ್ಗಿ ಹಿಗ್ಗು ತಂದಿಹುದು
ಕುಗ್ಗಿದ ಮೊಗದಲ್ಲಿ| ಹೊಮ್ಮಿಹುದು
ಬಂಗಾರ ಬೆಳೆಯ ಸಿರಿಯು॥

ಎಳ್ಳು ಬೆಲ್ಲವ ಬೀರಿ ಒಳ್ಳೊಳ್ಳೆಯ ಮಾತಾಡಿ
ಹುಸಿಯ ನುಡಿಯ ದೂಡುತ|ನಾವೆಲ್ಲ
ಚೆಂದದಿ ಒಳ್ಳೆಯತನದಲ್ಲಿ ಬದುಕೋಣ॥

ಆಚಾರವ ಬಿಡದೆ ಆನಾಚರವ ತುಳಿಯದೆ
ವಿಚಾರವ ಮತಿಯಲ್ಲಿಟ್ಟು|ಮಕರ ಜ್ಯೋತಿಯ
ದಿವ್ಯಪ್ರಭೆ ಬೆಳಗಲಿ ಮನದಲ್ಲಿ॥

ನೋವೆಂಬ ಕಹಿಯ ದೂರ ದೂಡುತ
ನಲಿಯೆಂಬ ಸಿಹಿಯ|ಹೊತ್ತು
ಭರವಸೆಯ ಬೆಳಕ ಹರಡಲಿ ಸಂಕ್ರಾಂತಿ॥

ದೀಪಕ್ ನಿಡಘಟ್ಟ
ಶಿಕ್ಷಕರು,
ನರಸಿಂಹರಾಜಪುರ, ಚಿಕ್ಕಮಗಳೂರು


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.