ಲೇಖಕರು : ಬೂದೇಶ್ವರ. ಎಸ್ ಎಸ್
ನನ್ನೊಳಗಿನ ಮಿತ್ರ
ಒತ್ತಡದಿ ಹೆಜ್ಜೆ ಹಾಕಿದ
ಆದಿಯಿಂದ ಅಂತ್ಯದವರೆಗೆ
ನಡೆದ ಸ್ನೇಹವನು ಅರಸಿ.
ನಡೆದಷ್ಟು ದೂರ
ಬಗೆದಷ್ಟು ಆಳ
ಬಗೆ ಬಗೆಯ ಕನಸು
ದುರಾಸೆಗಳ ಮನಸು.
ಕೈ ಬೀಸಿ ಕರೆದಿದೆ
ಜೀವವೊಂದು ಸನಿಹಕೆ
ಭಾವನೆಗಳ ಹಂಚಲು
ಮಾತುಗಳು ಆಸ್ಪಷ್ಟ.
ಸುರಿಯುತಿದೆ ಕಣ್ಣೀರು
ಜಲಪಾತದ ರೂಪದಿ
ಯಾಕಿಷ್ಟು ಕೋಪ
ಯಾಕಿಷ್ಟು ರಭಸ.
ಆಸ್ಪಷ್ಟತೆಯ ಮಾತಿನಲಿ
ಭಾವನೆಗಳ ಸಮ್ಮಿಲನ
ಕೇಳುವ ಹೃದಯಕು
ಕಿವುಡುತನದ ಅಂಜಿಕೆ.
ಜೋರಾಗಿ ಚೀರಿದರೆ
ಭಾವನೆಗಳು ಘನಘೋರ
ಹಿತವಾಗಿ ಚಿರಿದರೆ
ಹೃದಯಕೆ ಹಮ್ಮೀರ.
ಭಾವನೆಗಳ ಬೆಸೆಯಲು
ಕೈಕಾಲುಗಳು ಏತಕೆ
ಕಣ್ಣಸನ್ನೆಯ ಭಾವನೆಗೆ
ಹೃದಯವೇ ಮಿಡಿಯುತಿದೆ.
ಕ್ರೂರಿಗಳ ಆರ್ಭಟಕೆ
ಮಸಿಯುತಿವೆ ಹಲ್ಲುಗಳು
ಭಾರವಾದ ಮನಸುಗಳ
ಅರಿಯದೇ ನೋವನು.
ಮೂಕನಿಗೆ ಮೂಕನೇ
ದನಿಯಾಗಿ ನಿಂತಾಗ
ಕುರುಡನಿಗೆ ಕುರುಡನೆ
ಹೇಗಲಾಗಿ ನಿಂತಾಗ.
ಹೃದಯ ಹೀನರ
ಮುಂದೆ ಕೈಚಾಚಿ
ಬೇಡಿದರು ಕರಗದೇ
ಕರುಣೆಯಿರದ ಮೃಗಗಳಾದರೆ.
ಬೆತ್ತಲಾದ ಜಗದಿ
ಕ್ರೂರಿಗಳ ಧಮನ
ಬತ್ತಿದ ಕಣ್ಣಲಿ ಹನಿ
ನೀರಿಗೂ ದುರಂಕಾರ .
ಗೆಳೆಯನ ಬಳಿಕರೆದು
ಹೃದಯವ ಸ್ಪರ್ಶಿಸುವಾಸೆ
ಕರವೇ ಕಾಣಿಸದೆಲ್ಲಿ
ಮರೆತನೇ ಸೃಷ್ಟಿಕರ್ತ.
ಬೂದೇಶ್ವರ. ಎಸ್ ಎಸ್
ಪ್ರಾಚಾರ್ಯರು.
ಶ್ರೀ ಸಂಗಮೇಶ್ವರ ಪಪೂ ಕಾಲೇಜು
ಕೂಡಲಸಂಗಮ
ದಿನಾಂಕ :12/10/2022
No products were found for this query.
ಪ್ರಕಟಣೆಗಾಗಿ ಸಂಪರ್ಕಿಸಿ
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.