ಲೈಫ್‌ನ ಸಕ್ಸಸ್ ಮಂತ್ರ
₹195.00
Author : ಸಂತೋಷ್ ರಾವ್ ಪೆರ್ಮುಡ
Publishers Name : ಕದಂಬ ಪ್ರಕಾಶನ
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ನಮ್ಮ ಜೀವನದಲ್ಲಿ ನಾವು ಯಶಸ್ಸು ಗಳಿಸಬೇಕು ಎಂದರೆ ಅದಕ್ಕೆ ವಿಭಿನ್ನ ಮಂತ್ರ ಪರಿಸಬೇಕು. ನಮ್ಮ ಸೋಲಿಗೆ, ಬಡತನಕ್ಕೆ, ಅಪಯಶಸ್ಸಿಗೆ, ಜಂಜಾಟದ ಬದುಕಿಗೆ, ನೋವಿಗೆ ಮತ್ತು ದುಃಖಕ್ಕೆ ಯಾರು ಕಾರಣವೆಂದು ಒಮ್ಮೆ ಕೂಲಂಕುಶವಾಗಿ ಯೋಚನೆ ಮಾಡಿದರೆ ನಿಜಾಂಶ ತಿಳಿಯುತ್ತದೆ. ನಮ್ಮೆಲ್ಲ ಸೋಲು ಗೆಲುವುಗಳಿಗೆ, ನೋವು ನಲವುಗಳಿಗೆ, ಏಳು ಬೀಳುಗಳಿಗೆ, ಕಷ್ಟ ನಷ್ಟಗಳಿಗೆ, ಉನ್ನತಿ ಅವನತಿಗಳಿಗೆಲ್ಲ ನಾವೇ ಕಾರಣರು. ನಮ್ಮ ಸೋಲು-ಗೆಲುವು, ಬಡತನ-ಸಿರಿತನಕ್ಕೆ ನಾವೇ ಜವಾಬ್ದಾರರಲ್ಲದೇ ಮತ್ಯಾರೂ ಜವಾಬ್ದಾರರು ಆಗಿರುವುದಿಲ್ಲ. ನಮ್ಮ ಜೀವನದಲ್ಲಿ ನಾವು ಮಾಡುವ ಸಣ್ಣಪುಟ್ಟ ತಪ್ಪುಗಳು, ಬೇಜವಾಬ್ದಾರಿಗಳು, ನಿರ್ಲಕ್ಷ್ಯಗಳು ನಮ್ಮನ್ನು ಸೋಲಿನ ಸುಳಿಯಲ್ಲಿ ಸಿಲುಕಿಸಿ ನಮ್ಮನ್ನು ಅಪಯಶಸ್ಸಿನ ಕೂಪಕ್ಕೆ ತಳ್ಳುತ್ತವೆ. ಆದ್ದರಿಂದ ನಮ್ಮ ‘ಲೈಪ್‌ನ ಸಕ್ಸೆಸ್ ಮಂತ್ರ” ನಮ್ಮ ಬಳಿಯೇ ಇದೆ ಎಂದು ಹೇಳಬಹುದು. ನಮ್ಮ ಬದುಕಿನ ಅತಿದೊಡ್ಡ ಸಕ್ಸಸ್ ಮಂತ್ರ ನಾವೇ ಆಗಿರುತ್ತೇವೆ. ತುಸು ‘ಪ್ರಬುದ್ಧರಾಗಿ ಯೋಚನೆ ಮಾಡಿದರೆ ನಮ್ಮ ಭವಿಷ್ಯವು ಇನ್ನಷ್ಟು ಉಜ್ವಲ ಮತ್ತು ಸ್ಪಷ್ಟವಾಗಿ ಗೋಚರಿಸುತ್ತದೆ. ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗಬೇಕು ಎಂಬ ತುಡಿತ ಇದ್ದರೆ ಎಲ್ಲರೂ ಬದುಕಿನಲ್ಲಿ ಪಕ್ಸೆಸ್ ಮಂತ್ರವನ್ನು ಅಳವಡಿಕೆ ಮಾಡಿಕೊಳ್ಳಬೇಕು.
‘ಮಂತ್ರದಿಂದ ಮಾವಿನ ಕಾಯಿ ಉದುರುವುದಿಲ್ಲ’ ಎನ್ನುವ ಗಾದೆ ಮಾತು ಎಷ್ಟು ಸತ್ಯವೋ ಅದೇ ರೀತಿ ಬದುಕಿನಲ್ಲಿ ಯಶಸ್ಥ ಅಷ್ಟು ಸುಲಭವಾಗಿ ದಕ್ಕುವುದಿಲ್ಲ. ಅದಕ್ಕಾಗಿ ಕಠಿಣ ವ್ರತವನ್ನು ಮಾಡಬೇಕು ಹಲವು ತ್ಯಾಗಗಳನ್ನು ಮಾಡಬೇಕು, ಕಣ್ಣೀರಿನಿಂದ ಕೂಡಿದ ಸನ್ನಿವೇಶಗಳನ್ನೂ ನಿರ್ಲಿಪ್ತತೆಯಿಂದ ಎದುರಿಸಬೇಕು, ಹಲವು ವಿಚಾರಗಳಲ್ಲಿ ನಮ್ಮ ವ್ಯಕ್ತಿತ್ವವನ್ನು ನಾವು ಬದಲಾವಣೆ ಮಾಡಿಕೊಳ್ಳಬೇಕು, ಹಲವು ವಿಚಾರಗಳನ್ನು ಬಿಟ್ಟುಬಿಡಬೇಕು, ಹಲವು ವಿಚಾರಗಳಲ್ಲಿ ರಾಜಿ ಅಗಬೇಕು. ಈ ಎಲ್ಲದರಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು ಶಿಲ್ಪದಂತೆ ಕೆತ್ತನೆಗೆ ಒಳಪಟ್ಟ ವ್ಯಕ್ತಿಗಳ ಷ್ಟೇ ಯಶಸ್ಸು ಎನ್ನುವ ಮಂತ್ರವನ್ನು ಪಠಿಸಬಹುದು. ಈ ಭೂಮಿಯಲ್ಲಿ ಹುಟ್ಟಿದ್ದೇನೆ, ಹೇಗೋ ಬದುಕಿದರಾಯ್ತು ಎಂದು ಬದುಕುವಾತ ಜೀವನದ ಸಾಗರವನ್ನೇ ದಾಟಲಾರ. ಆದ್ದರಿಂದ ಯಶಸ್ಸಿಗಾಗಿ ಹಲವು ಮಂತ್ರಗಳನ್ನು ಪ್ರತಿಕ್ಷಣವೂ ಪಠಿಸಬೇಕು ಮತ್ತು ಹಲವು ವಾಗ್ದಾನ ಮಾಡಕಾದ್ದು ಅತೀ ಮುಖ್ಯ.


Reviews
There are no reviews yet.