
ಲೇಖಕರು : ಡಾ.ಯಮನಪ್ಪ ಸಂ.ಹೊಸಮನಿ
ಬೇಕೆ ಬೇಕು ಗಾಂಧಿ ಯಾತಕ್ಕೆ ?
ಗಾಂಧೀ ಖಾದಿ ಬಟ್ಟೆ ತೊಟ್ಟವರಿಗೆ ಬೇಕು
ಗಾಂಧೀ ಸಧನದಲ್ಲಿ ಬಡಾಯಿ ಕೊಚ್ಚುಕೊಳ್ಳುವವರಿಗೆ ಬೇಕು
ಗಾಂಧೀ ದೇಶನಾಳುವ ಪಿಎಂಗೂ ರಾಜ್ಯನಾಳುವ ಸಿಎಂಗೂ ಬೇಕು
ಗಾಂಧೀ ಯಾವಾಗಲೂ ತಂಟೆ ತೆಗೆಯುವ ವಿಪಕ್ಷರಿಗೂ ಬೇಕು
ಗಾಂಧಿ ಬೇಕೆ ಬೇಕು !
ಬೇಕೆ ಬೇಕು ಗಾಂಧಿ ಯಾತಕ್ಕೆ ?
ಗಾಂಧಿಯು ಪಟ್ಟಣಕ್ಕೊಂದು ರಸ್ತೆಗೆ ಹೆಸರಿಡಲು ಬೇಕು
ಗಾಂಧಿಯು ನಗರದಲ್ಲೂಂದು ಪುಸ್ಥಳಿ ಅನಾವರಣಗೊಳ್ಳಿಸಲು ಬೇಕು
ಗಾಂಧಿಯು ಗ್ರಂಥಾಲಯಕ್ಕೊಂದು ಪುಸ್ತಕ ಇಡಲು ಬೇಕು
ಗಾಂಧಿಯು ನೊಟಿನೊಳ್ಳಗೆ ಮುದ್ರಿಸಲು ಬೇಕು
ಗಾಂಧಿ ಬೇಕೆ ಬೇಕು !
ಬೇಕೆ ಬೇಕು ಗಾಂಧಿ ಯಾತಕ್ಕೆ ?
ಗಾಂಧೀ ಫೋಟೂ ಕೊರ್ಟ-ಕಛೇರಿಯಲ್ಲಿ ನೇತಾಕಲು ಬೇಕು
ಗಾಂಧೀ ಫೋಟೂ ಶಾಲಾ-ಕಾಲೇಜಿನಲ್ಲಿ ಮಾಡಿನಲ್ಲಿಡಲು ಬೇಕು
ಗಾಂಧೀ ಫೋಟೂ ರಾಜಕಾರಣಿಯ ಮನೆಯ ಶೊಕೇಶಿನಲ್ಲಿಡಲು ಬೇಕು
ಗಾಂಧೀ ಪೋಟೂ ಖಾದಿ ಗ್ರಾಮೂದ್ಯೋಗಲ್ಲಿಡಲು ಬೇಕು
ಗಾಂಧಿ ಬೇಕೆ ಬೇಕು !
ಬೇಕೆ ಬೇಕು ಗಾಂಧಿ ಯಾತಕ್ಕೆ ?
ಗಾಂಧೀ ಮೆಟ್ಟಿರುವ ಪಾದರಾಕ್ಷಿ ಬೇಕು
ಗಾಂಧೀ ತೊಟ್ಟಿರುವ ಬಟ್ಟೆ ಬೇಕು
ಗಾಂಧೀ ಹಾಕಿರುವ ಕನ್ನಡಕ ಬೇಕು
ಗಾಂಧೀ ಬಳಸಿದ ವಸ್ತುಗಳು ಹರಾಜಕಿಡಲು ಬೇಕು
ಗಾಂಧಿ ಬೇಕೆ ಬೇಕು !
ಬೇಕೆ ಬೇಕು ಗಾಂಧಿ ಯಾತಕ್ಕೆ ?
ಗಾಂಧೀ ಶಾಂತಿ-ಸತ್ಯಾಗ್ರಹಕ್ಕೆ ಬೇಕು
ಗಾಂಧೀ ಪ್ರತಿಮೆಗೆ ಅಂಜಲಿ-ಸೇವಂತಿ ಬೇಕು
ಗಾಂಧೀ ಸಮಾದಿಗೆ ಶ್ರದ್ಧಾಂಜಲಿ ಬೇಕು
ಗಾಂಧೀ ತತ್ವಗಳಿಗೆ ತಿಲಾಂಜಲಿ ತಿಲಾಂಜಲಿ
ಗಾಂಧಿ ಬೇಕೆ ಬೇಕು !
ಡಾ.ಯಮನಪ್ಪ ಸಂ.ಹೊಸಮನಿ
ಕನ್ನಡ ಸಹಾಯಕ ಪ್ರಾಧ್ಯಾಪಕರು
ಮೊಬೈಲ್ – ೯೭೪೩೦೬೦೬೧೪
No products were found for this query.
-
ಹೃದಯ ಸಿಂಹಾಸನದಲ್ಲಿ
ಗಜ಼ಲ್ ಸಂಕಲನ (Ghazal collection)₹100.00Original price was: ₹100.00.₹90.00Current price is: ₹90.00.
ಪ್ರಕಟಣೆಗಾಗಿ ಸಂಪರ್ಕಿಸಿ
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.