ಹೊಲದಾಗ ಇರ್ತಾನ, ಮಣ್ಣಾಗ ದುಡಿತಾನ,
ಬಿತಿದ ಬೀಜ ಬೆಳೆದು, ಮಣ್ಣಿನ ಮಗನಾಗ್ತಾನ!
ಕಣ್ಣಾಗ ಮಣ್ಣು ಬಿದ್ದರೂ, ನಗುತಲೇ ಇರ್ತಾನ,
ದೇಶಕ್ಕನ್ನ ನೀಡ್ತಾನ, ನಮ್ಮ ಈ ರೈತಣ್ಣ!
ಸುಮ್ಮೆ ಸುಮ್ಮೆ ಸುಳ್ಳಿಗೆ ಆತ ಹೋಗಂಗಿಲ್ಲ
ಸುಖವಿಲ್ಲದ ಜೀವನದ ಸಂಕಟವನುಂಡಾನ;
ವರ್ಷದ ಪೂರ್ತಿ ದಿನವೂ ದುಡಿಯುವ ಆತನಿಗೆ,
ಗೊತ್ತಿಲ್ಲ ಎಂದೂ ಒಮ್ಮೆಯೂ ರಜೆಯ ದಿನ!
ಹರಕ ಅಂಗಿ ಹಾಕ್ತ್ಯಾನ, ಬಿಸಿಲಗ ದುಡಿತಾನ,
ಸಿಟ್ಟ್ಯಾಗ ಕುಂತು ಉಣ್ಣಾವ್ಗಿ ರೈತನ ಗೋಳೇನು ಗೊತ್ತಾ?
ಬಿತಿದ ಬೆಳೆಗೆ ಸೂಕ್ತ ಬೆಲೆಯೂ ಇಲ್ಲದಂತಾಗಿದೆ,
ಈ ಕಷ್ಟ ತಿಳಿಯದೆ ಹೀಗಳಿಸುವವರು ರೈತರೇ ಅಲ್ಲ!
ದುಃಖದ ಮಡಿಲಲ್ಲಿ ಕಣ್ಣೀರಿಟ್ಟು ಮಣ್ಣಿನ ಮಗ,
ನಿನಗೆ ನನಗೆ ಅನ್ನ ನೀಡುವ ಜೀವ ಇವನು;
ಅನ್ಯಾಯವನ್ನೆದುರಿಸಿ ಇಂದು ಧರಣಿ ಕುಳಿತಾನ,
ಕರುಣೆ ತೋರಿ ಸಲಹುವ ನನ್ನೊಡೆಯ ಶಿವನೇ!
ಮಹಾಂತೇಶ ಖೈನೂರ