ಸಂಪಾದನೆ:– ಬಸವರಾಜ, ಶಿ,ಬೆನ್ನೂರ
ಪುಸ್ತಕ ದ ಬೆಲೆ:– ೧೨೦:೦೦ ರೂಪಾಯಿ
ಪ್ರಕಾಶಕರು:- ಕಪ್ಪತಗಿರಿ ನ್ಯೂಸ್
ಗಜೇಂದ್ರಗಡ ದಲ್ಲಿ ಜರುಗಿದ ಹತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನ ದಲ್ಲಿ ಭೇಟಿಯಾದ ಬಸವರಾಜ ಅವರು ನನಗೆ ತಮ್ಮ ಸಂಪಾದನೆಯ ಸೋಲು ಸೋಲಿಸದು ಪುಸ್ತಕ ವನ್ನು ಪ್ರೀತಿಯಿಂದ ಓದಲು ನೀಡಿದರು. ಪುಟ ತಿರುವಿದಂತೆ ಪುಸ್ತಕ ದಲ್ಲಿರುವ ಮೌಲಿಕ ಲೇಖನಗಳು ಮನಸೂರೆಗೊಂಡವು ಪ್ರತಿಯೊಬ್ಬರ ಲೇಖನಗಳು ಸಹ ಉತ್ಕೃಷ್ಟ ಬರಹಗಳಿಂದ ಓದುಗರ ಹೃದಯ ವನ್ನು ಮೀಟುತ್ತವೆ. ಸೋಲಿನ ವ್ಯಾಖ್ಯಾನಗಳನ್ನು ಅವರವರು ಕಂಡಂತೆ ನಿರೂಪಿಸುತ್ತಾ ಸಾಗಿದ್ದಾರೆ ಸೋಲಿಗೂ ಕೂಡಾ ನಾನಾ ಮುಖಗಳಿರುವದನ್ನು ಸಾದರಪಡಿಸುತ್ತಾ ಸಾಗುತ್ತಾರೆ. ಸೋಲು ನಮ್ಮನ್ನು ಸೋಲಿಸುವದಿಲ್ಲ ನಾವೇ ಸೋಲಿಗೆ ತಲೆಬಾಗಿರುತ್ತೇವೆ ಮತ್ತು ಅಪ್ಪಿಕೊಂಡಿರುತ್ತೇವೆ. ಹತಾಶೆಯ ಕೊನೆಯ ಮೆಟ್ಟಿಲು ಸೋಲು ಎಂದು ನಾವು ಕರೆಯುತ್ತೇವೆ.
ಗೆಲುವಿನ ಗೆಣಸು ತಿನ್ನುವದು ಸುಲಭವಲ್ಲ ನಿರಂತರ ವಾಗಿ ಪ್ರಯತ್ನ ಗಳ ಹಾದಿಯಲ್ಲಿ ಪ್ರಮಾದ ಗಳ ಸಂಖ್ಯಯನ್ನು ಕಡಿಮೆ ಗೊಳಿಸುತ್ತಾ ಬಂದಾಗ ಗೆಲುವು ನಮ್ಮ ಪಾಲಾಗುತ್ತದೆ. ಮರಳಿ ಮರಳಿ ಯತ್ನಿಸುವ ನಮ್ಮ ಪ್ರಯತ್ನ ಗಳ ಸಂಖ್ಯ ಅಧಿಕ ವಾದಾಗ ಸೋಲು ಭಯಪಡುತ್ತಾ ಸಾಗುತ್ತದೆ ನಮ್ಮ ಹತ್ತಿರ ಸುಳಿಯಲೂ ಹಿಂಜರಿಯುತ್ತದೆ. ಹಾಗಾಗಿ ನಾವು ಹಲವಾರು ಅಸಂಖ್ಯ ಪ್ರಯತ್ನ ಗಳ ಸಂಕಲನವೇ ಗೆಲುವು ಎಂದು ತಿಳಿದುಕೊಳ್ಳಬೇಕು. ೨೪ ಜನ ನಾಡಿನ ಮೂಲೆ ಮೂಲೆಗಳಲ್ಲಿರುವ ಲೇಖಕರ ಲೇಖಕಿಯರ ಲೇಖನಗಳನ್ನು ಓದಿ ಅವುಗಳನ್ನು ಆಯ್ಕೆ ಮಾಡಿದ ಸಿ,ಕೆ,ಗಣಪ್ಪನವರ ಸರ್ ಗೆ ಹಾಗೂ ಸಂಪಾದಕರಾದ ಬಸವರಾಜ ಬೆನ್ನೂರ ಅವರಿಗೂ ಮುನ್ನುಡಿ ಬರೆದ ವಾಸುದೇವ ನಾಡಿಗ್ ಹಾಗೂ ಆಶಯ ನುಡಿಗಳನ್ನಾಡಿರುವ ನಾಡೋಜ, ಡಾ. ಮಹೇಶ ಜೋಶಿ ಹಾಗೂ ಬೆನ್ನುಡಿ ಬರೆದಿರುವ ಜೋಗಿ ಅವರಿಗೂ ಧನ್ಯವಾದ ಗಳು
ಸಹೃದಯ ಓದುಗರೇ ಪುಸ್ತಕ ಕೊಂಡು ಓದಿ ಬರಹಗಳನ್ನು ಬೆಂಬಲಿಸಬೇಕೆಂದು ತಮ್ಮಲ್ಲಿ ವಿನಂತಿ
ಕೊಟ್ರೇಶ ಜವಳಿ
ಹಿರೇವಡ್ಡಟ್ಟಿ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ