ನಮ್ಮ ದೇಶ ಭಾರತ ತಂದಿರುವುದು ಹಿರಿಮೆ
ನೀಡಿದೆ ನಮ್ಮೆಲರಿಗಿಂದು ಸ್ವಾತಂತ್ರ್ಯದ ಹೆಮ್ಮೆ
ಸಂಸ್ಕೃತಿ ಸಹಧರ್ಮ ನೀತಿಯ ಸಮಾನತೆ
ಸಾರುತಿದೆ ಸಂವಿಧಾನದಿ ಪ್ರಜಾಪ್ರಭುತ್ವತೆ
ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳು
ಸಂವಿಧಾನದ ಪ್ರಮುಖವಾದ ತತ್ವಗಳು
ನಮ್ಮೆಲ್ಲರ ಸಮಾನತೆಯ ಶಿಕ್ಷಣ ನೀತಿಯು
ಪ್ರೇರಕವಾಗಿವೆ ಸಂವಿಧಾನದ ಸಂಹಿತೆಯು
ನಮ್ಮ ಮೂಲಭೂತ ಹಕ್ಕುಗಳ ಸೌಕರ್ಯ
ದೇಶದ ಸಂಪನ್ಮೂಲಗಳ ರಕ್ಷಿಸುವ ಕೈಂಕರ್ಯ
ರಾಷ್ಟ್ರ ಧ್ವಜಕೆ ತಲೆ ಎತ್ತಿ ನಮಿಸೋಣ
ರಾಷ್ಟ್ರಗೀತೆಯ ಹಾಡಿ ಗೌರವಿಸೋಣ
ಸ್ವಾತಂತ್ರ್ಯ ಧರ್ಮ ಸಂಸ್ಕೃತಿ ಸಮಾನತೆಗಳು
ಆಗಿಹವು ನಮ್ಮ ಮೂಲಭೂತ ಹಕ್ಕುಗಳು
ನಮ್ಮ ಈ ಸೌಕರ್ಯಗಳಿಗೆ ಶ್ರಮಿಸಿದವರಿಗೆ
ತಲೆಬಾಗಿ ಗೌರವಿಸೋಣ ಆ ಮಹಾಶಯರಿಗೆ
ಬಲಿಷ್ಠರಾಷ್ಟ್ರ ನಿರ್ಮಾಣಕ್ಕೆ ಸಂವಿಧಾನ ರಚನೆ
ಪ್ರಜಾಪ್ರಭುತ್ವ ವ್ಯವಸ್ಥೆಗೆ ಸರ್ಕಾರದ ಮನ್ನಣೆ
ಗಣ್ಯರ ಶ್ರಮದಿಂದಾಯ್ತು ಐತಿಹಾಸಿಕ ಈ ದಿನ
ಗಣರಾಜ್ಯೋತ್ಸವವೆಂಬ ಈ ಸಂತಸದ ಸುದಿನ
ನಳಿನಾ ದ್ವಾರಕನಾಥ್
ಬೆಂಗಳೂರು
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.