ಕನ್ನಡ ಎಂದರೆ ಸಿರಿ ನುಡಿ
ಕನ್ನಡ ಎಂದರೆ ಸಿರಿ ಗಂಧದ ಗುಡಿ
ಕನ್ನಡ ಎಂದರೆ ಸಹಸ್ರ ವರ್ಷ ವೈಭವ
ನಾಡು ಗಡಿ, ಸುವರ್ಣ ಸಿರಿ ನುಡಿ
ಕನ್ನಡ ಎಂದರೆ ಕೇವಲ ಭಾಷೆ ಅಲ್ಲ
ಕನ್ನಡ ಎಂದರೆ ಭಾವಬಸಿರು ಕನ್ನಡ ಎಂದರೆ
ಎದೆ ತಂತಿ ಹಸಿರು ಕನ್ನಡ ಎಂದರೆಮೈಅವರಿಸುವ
ಮನದಹೊಂಬಾಳೆ :ಅಳಿಸಲಾಗದ ದಿವ್ಯ ಹೆಸರು
ಕನ್ನಡ ಎಂದರೆ ಹರಿಹರರಾಘವಂಕ ರಗಳೆ
ಕನ್ನಡ ಎಂದರೆ ಚಾಮರಾಸನ ಪ್ರಭುಲಿಂಗಲೀಲೆ
ಕನ್ನಡ ಎಂದರೆ ದೇವ್ ಭಾಷೆ, ದಿವ್ಯ ಭಾಷೆ
ದಿವ್ಯ ಚೇತನ, ಮನ ಮೋಹನ ಹಸಿರು ಲತೆ ಈಕೆ
ಕನ್ನಡ ನಾಡು ಸುವರ್ಣ ಸುಂದರ ಸೂಪರ್ ಬೀಡು
ಕನ್ನಡ ನಾಡು ಶಿಲ್ಪ ಕಲೆಯ ಬೇಲೂರ್ ಹಳೇಬೀಡು
ಕನ್ನಡ ನಾಡು ಪುಲಕೇಶಿ, ಮೌರ್ಯ, ಚಾಣಕ್ಯ
ಟಿಪ್ಪು ವಾಡೆಯರ್, ಕೃಷ್ಣ ದೇವ್ರಾಯ ನಾಡು
ಕನ್ನಡ ವೀರ ಕೇಸರಿ ಕಲಿಗಳು ಆಳಿದ
ಹೊನ್ನಸಿರಿ ನಾಡಿದು ಸುವರ್ಣ ಸುಂದರ
ಸೊಬಗಿನ ಸೊಗಸಿನ ಕರುನಾಡು ಕರುನಾಡು
ಚೆನ್ನ, ಇದರ ಮಣ್ಣು ಚಿನ್ನ ಚಿನ್ನ ರೀ
ಕನ್ನಡ ಜನರು ವಿಶಾಲರು, ಸಹೃದಯಿ
ಧಾರಾಳಿಗಳು ಅವರನ್ನು ದಯವಿಟ್ಟು ದುರು
ಉಪ ಯೋಗ ಮಾಡಬೇಡಿ ಕನ್ನಡ ಕಲೀರಿ ನಲಿರಿ,ಕಲಿಸಿ
ಕುಣಿರಿ ಕನ್ನಡ ವೇ ಉಸಿರು ಕನ್ನಡವೇ ಹೃದಯ ಹಸಿರು
ಪ್ರೀತಿ ಭರತ್
ಲೇಖಕರು
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.