ನಿನ್ನ ನಗುವಲಿ ನಗುವಾಗಿ
ಬರುವಾಸೆ ನನಗೆ ನಿನ್ನ ಮಡಿಲಲಿ
ಮಗುವಾಗಿ ಇರುವಾಸೆ ನನಗೆ
ನೆನಪುಗಳ ಅಲೆಯಲಿ ತೇಲುತಿರುವೆಯಲ್ಲೆ
ನಲ್ಲೆ ಹುಡುಕ ಹೊರಟ ಹೃದಯದ
ನಾವಿಕನಾಗಿ ಸೇರುವಾಸೆ ನನಗೆ
ಕನಸುಗಳ ಬಿಕರಿಗಿಟ್ಟು ಕುಳಿತಿರುವೆಯೇಕೆ
ಕನಸ ಮಾರುಕಟ್ಟೆಯಲಿ ಜೊತೆಯಾಗಿ
ಬೆರೆವಾಸೆ ನನಗೆ
ಚೈತ್ರವು ಕೋಕಿಲನ ಸೆಳೆದಂತೆ
ಸೆಳೆದೆಯಲ್ಲ ಇಂದು ನಿನ್ನೊಲವ
ಧ್ವನಿಯಾಗಿ ಹೊಸತನದಿ ಮೆರೆವಾಸೆ ನನಗೆ
ದೊರೆಯಾದ ಸಾತ್ವಿಕನ ನೀಲಿ ಕಂಗಳಲಿ
ಬಂದಿಸಿದೆ ಸುಗುಣ ಸುಂದರಿ ನಿನ್ನೊಲವ
ಬೆಳಕಾಗಿ ಸುರಿವಾಸೆ ನನಗೆ….
ಸೋಮಶೇಖರ ಎನ್ ಬಾರ್ಕಿ
ರಾಜ್ಯಶಾಸ್ತ್ರ ಉಪನ್ಯಾಸಕರು
ಆದರ್ಶ ಸಂಯುಕ್ತ ಪದವಿ ಪೂರ್ವ
ಕಾಲೇಜು ಬೇವೂರ.
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
-
- Out of StockRead more
-
-
- Sale! Add to basket
- ಕಥೆಗಳು (Stories)
Edeya Hanate
- Original price was: ₹250.00.₹245.00Current price is: ₹245.00.