You are currently viewing ಏಕಾಂತದ ರೋಮಾಂಚನ

ಏಕಾಂತದ ರೋಮಾಂಚನ

ಹಿಂದೇ ನೆರಳಿನಂತೆ ಸುಳಿದು
ಜನ್ಮದ ಬಂದ ಎನ್ನುವಂತೆ
ಭಾವನೆಗಳ ಸೃಷ್ಟಿಸಿದವನ ನೆನೆಯೊ
ಆ ಏಕಾಂತವೇ ರೋಮಾಂಚನ

ನಯನದಲ್ಲಿ ಸೆರೆಯಿಡಿದು
ಬಣ್ಣದ ಕನಸುಗಳ ಬಿತ್ತಿ
ಖುಷಿಯ ನಾಚಿಕೆಯ ಸ್ಪರ್ಶ
ಕೊಟ್ಟವನ ಆ ಏಕಾಂತವೇ ರೋಮಾಂಚನ …

ಅವರೊಳಗೆ ನನಾಗಿ
ನನ್ನಲ್ಲಿ ನಾನೇ ಮಾಯವಾದ
ಮರೆಯದ ಪ್ರೀತಿ ನೀಡಿದವನ
ಆ ಏಕಾಂತವೇ ರೋಮಾಂಚನ

ತಂಗಳಿಯ ಸೋಕುವಿಕೆ
ಹಿತವಾದ ಹಿಬ್ಬನಿಯ ಅಪ್ಪುಗೆ
ಬೆಚ್ಚಗಿನ ಬೆಸುಗೆಯ ಮುತ್ತಿಟ್ಟವನ
ಆ ಏಕಾಂತವೇ ರೋಮಾಂಚನ

ಬದುಕಿಗೆ ಸುಂದರ ಹೊಸತನವ ಕಟ್ಟಿ
ಜೊತೆಗಿನ ಹೆಜ್ಜೆಗಳ ನೆನೆದು
ಸಿಹಿ ನೆನಪುಗಳ ತುಂಬಿ ಮನವೆಲ್ಲ ನಗುವಾಗಿಸುವ
ಆ ಏಕಾಂತವೇ ರೋಮಾಂಚನ

ಸ್ವಾತಿ ಚೈತ್ರ
ನವಲಗುಂದ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.