ನರ ಬೊಂಬೆ ಮಾಡ್ಯಾನ ಕುಂಬಾರ
ಬ್ರಹ್ಮ ಎಂಥಹ ವಿಸ್ಮಯಗಾರ
ಬೇರೆ ಬೇರೆ ಆಗ್ಯಾವ ಬೊಂಬೆ ಆಕಾರ
ಒಂದರಗಿಂತ ಒಂದು ಬಾಳ ಸುಂದರ
ಎಲ್ಲಾ ಅಂಗಾಕಕೊಟ್ಟಾನಜೋಡಿದರ
ಇಟ್ಟಾನ ಬೊಂಬೆಗೆ ಒಂಬತ್ತು ದ್ವಾರ.
ಒಳಗಡೆ ಇಟ್ಟಾನ ಎಲುಬಿನ ಹಂದರ
ನಡುವೆ ಲೇಪಿಶಾನ ಮಾಂಸದ ಕೆಸರ
ಮೇಲೆ ಹೊದಿಶಾನ ತೊಗಲಿನ ಪದರ
ಎದೆಯಲ್ಲಿ ಕೊಟ್ಟಾನ ಜೀವಕಾಳ ಉಸಿರ
ಎಲ್ಲಾ ಅಂಗಕ್ಕೂ ಬೇರೆ ಬೇರೆ ಕೆಲಸ
ಒಂದಕ್ಕಿಂತ ಇನ್ನೊಂದು ಮಾಡ್ತಾವ ಸೊಗಸ
ಉಸ್ತುವರಿಗೆಲ್ಲ ಮಾಡ್ಯಾನ್ ಒಬ್ಬನಿಗೆ ನೇಮಕ
ಅವನ ಹೆಸರೇ ಅಂತಆತ್ಮ ಎಂಬ ಮಾಲಿಕ.
ಬಾಯಿಗೆ ಹೇಳ್ಯಾನ ಸತ್ಯ ಮಾತಾಡಕ
ಕಣ್ಣಿಗೆ ಹೇಳ್ಯಾನ ಒಳ್ಳೆಯದು ನೋಡಕ
ಕಿವಿಗಳಿಗೆ ಹೇಳ್ಯಾನ ಸುಮಧುರ ಕೇಳಾಕ
ಕೈಗಳಿಗೆ ಹೇಳ್ಯಾನ ಸಹಾಯ ಮಾಡಲಕ
ಹಿಂಗ ನಡೆಯದಿದ್ದರೆ ನೋಡೋ ಮುಂದಕ
ವೈದು ಹಾಕತೀನಿ ನಿನ್ನ ಘೋರ ನರಕಕ್ಕ
ಆಗು ನೀ ಸದ್ಗುರುವಿನ ಸೇವಕ
ಕೊಡುವೆನು ನಿನಗೆ ಮುಕ್ತಿ ಎಂಬ ಪದಕ.
ನರ ಬೊಂಬೆ ಮಾಡ್ಯಾನ ಕುಂಬಾರ
ಬ್ರಹ್ಮ ಎಂತಹ ವಿಸ್ಮಯಗಾರ
ಶಿವಲೀಲಾ .ಎಸ್ .ಧನ್ನಾ
ಜಿ:-ಕಲ್ಬುರ್ಗಿ.
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.