ಲೇಖಕರು : ಸ್ವಾತಿಚೈತ್ರ(ಚೈತ್ರ ಆನಂದ)
ಮೊದಲ ನೋಟದಲ್ಲೇ
ಸೆಳೆದೆ ನಿನ್ನಡಿಗೆ ನನ್ನ
ಸದಾ ನಿನ್ನ ಬಿಂಬವೇ
ನಯನದಲ್ಲಿ ಇನ್ನ
ಎದುರಾಗಿ ಕನಸಾಗಿ
ಮನದಲ್ಲಿ ಕಾಡುವೆ ನನ್ನ ಹಚ್ಚಗಿದೆ ನಿನ್ನ
ಗುರುತೆ
ಹೃದಯದಲ್ಲಿ ಇನ್ನ
ಒಲವಿನ ಮಮತೆಯಲ್ಲಿ ಮಡಿಲ
ಮಗುವಾಗಿಸಿದೆ ನನ್ನ
ಉಸಿರಾಗಿದೆ ನನ್ನ ಉಸಿರಿಗೆ
ಉಸಿರಲ್ಲಿ ಇನ್ನ
ಅನುರಾಗದ ಮಳೆಯಲ್ಲಿ
ಹೂವಾಗಿ ಅರಳಿಸಿದೆ ನನ್ನ
ಮೋಹಕ ನಿನ್ನ ಗುಂಗೆ
ನನಲ್ಲಿ ಇನ್ನ …
ಸ್ವಾತಿಚೈತ್ರ(ಚೈತ್ರ ಆನಂದ)
ಪ್ರಕಟಣೆಗಾಗಿ ಸಂಪರ್ಕಿಸಿ
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.



