ಲೇಖಕರು : ಶ್ರೀಕಾಂತಯ್ಯ ಮಠ
ಹೇಳುವ ಮಾತು ನೂರಿದೆ
ಕೇಳುವ ಮನಸ್ಸು ದೂರಿದೆ
ಹೃದಯದ ಬಡಿತ ಜೋರಿದೆ
ಕನಸುಗಳ ಮಧ್ಯೆ ಹೌಹಾರಿದೆ.
ಎಲ್ಲಿರುವೆ ಮನದ ಮಲ್ಲಿಗೆ
ವಿಳಾಸ ಕೊಡು ನಾ ಬರುವೆ ಅಲ್ಲಿಗೆ
ನೀ ಎಂದೆಂದೂ ನನಗೆ ಮುಗಿಲ ಮಲ್ಲಿಗೆ
ಇಲ್ಲಿಗೆ ಮುಗಿಯಿತೆ ಈ ಪ್ರೀತಿ ಸಲುಗೆ
ಹೇಳಲು ಬರುವೆ ನಿನ್ನಲ್ಲಿಗೆ
ತಡೆಯದಿರು ಈ ಮನಸ್ಸು ಮೃದು ಮಲ್ಲಿಗೆ
ಹೇಳದೆ ಹೋದವಳು ಹೇಳ ಬೇಡ ಕಾರಣ ನಾನ್ನ ಜಾಜಿಮಲ್ಲಿಗೆ
ಎಷ್ಟು ಸಹಿಸಲಿ ನೋವಿನ ಹೃದಯ ವಿರಹ
ಇಷ್ಟವಿಲ್ಲವೆ ಈ ಹೃದಯ ಬರೆದ ಪ್ರೀತಿ ಬರಹ
ನಲಿವಿಲ್ಲದೆ ದಿನ ಕಳೆದವು
ಭಾವದಲ್ಲಿ ನೂರು ತರಹ.
ಎಷ್ಟು ದೂರ ಅಳತೆ ಮೀರಿದೆ
ಹುಡುಕುವ ದಾರಿ ಉಳಿದಿಲ್ಲ ಸಾಕಾಗಿ ಹೋಗಿದೆ
ಬರುವ ಮಾತು ನಿಶ್ಚಿತವಿಲ್ಲ
ನೀ ಹೋಗಿದ್ದೆ ಆಶ್ಚರ್ಯ ವಿಸ್ಮಯವಾಗಿದೆ.
ಭರವಸೆಯಲ್ಲಿ ಕಾದಿರುವೆ ಇದಿರಾಗು
ಎದುರಿಗೆ ನಾ ಬರುವೆ ಬೇಗ ಮುಂದಾಗು
ಅತ್ತ ಹೋಗಬೇಡ ಸುತ್ತುವರೆಯಬೇಡ
ಸತ್ತು ಹೋಗುವನೆಂದು ತಿಳಿದು ಬಾ ನನ್ನೆದೆಯ ಸದಾ ಮಲ್ಲಿಗೆ.
ಶ್ರೀಕಾಂತಯ್ಯ ಮಠ
ಪ್ರಕಟಣೆಗಾಗಿ ಸಂಪರ್ಕಿಸಿ
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.



