ಗಝಲ್ (ತುಳಸಿ ವಿವಾಹ ಪೂಜೆ)

ಜಯಶ್ರೀ ಭ ಭಂಡಾರಿ

ಅರಮನೆ ಗುರುಮನೆ ಕಿರುಮನೆ ಎಲ್ಲೆಡೆ ಭೇದವಿಲ್ಲದೇ ಬೆಳೆಯುವೆ.

ಅಸುರೀ ಶಕ್ತಿಯ ಸೆಳೆದು ದೂರವಿರಿಸಿ ಸಕಾರಾತ್ಮಕದಿ ತೊಳೆಯುವೆ.

ವಿವಿಧೆಡೆ ವಿಶ್ವದಿ ನಿತ್ಯವೂ ಪೂಜಿಸುತ ಭಕ್ತಿಯಿಂದ 

ವಂದಿಸುವರಲ್ಲವೇ

ಕವಿದ  ಕೃಷ್ಣನ ತುಲಾಭಾರ ರುಕ್ಮಿಣಿ ಭಕ್ತಿಗೆ ಒಲಿದು  ಅಭಯದಿ ಅಳೆಯುವೆ

ಕರೋಣಾ ಕಾಲಘಟ್ಟದಲ್ಲಿ ಸಂಜೀವಿನಿಯಾಗಿ ಪೊರೆದ ಮಾತೆಯು.

ಭರೋಸೆ ಬೊಗಸೆ ತುಂಬ ನೀಡಿ ಚಂಚಲ ಜೀವಗಳಂದದಿ ಮೊಳೆಯುವೆ.

ಇನ್ನೇನು ಬದುಕೇ ಕತ್ತಲೆಯೆಂದರಿತಾಗ ಬೆಳಕ ಬೆಳಗಿದೆ ಲೋಕ ತೂಗಿದೆ

ತನ್ನನೇ ಬಲಿಕೊಡುವ ಕರಾಳ ಸಮಯ ದಿವ್ಯ ವೃಕ್ಷಗಳೆಲ್ಲ  ಮಾಯದಿ ಕಳೆಯುವೆ.

ಧರೆಯ ತುಂಬಾ ಕಾರ್ತಿಕ ಮಾಸ ಧಾರೆಯ ಮುಹೂರ್ತ ಸಡಗರ ತುಂಬುವುದು

ಒರೆದು ಬಂಧು ಬಳಗವು ಕಲ್ಯಾಣ ಕಂಕಣ ಕೂಡಿ ವಿವಾಹದಿ ತಳೆಯುವೆ 

ಹುಣಸೆ,ನೆಲ್ಲಿ,ಬಾಳೆ, ಪುಷ್ಪ ಅಲಂಕಾರದಿ ಶೋಭಿಸುವ ವೃಂದೆಯ ವೃಂದಾವನ.

ತುಳಸಿ ಪೂಜೆ ದೀಪ ಧೂಪ ಪಾಯ‌ಸ ಅಕ್ಷತೆಯ ಮಂಗಳದಿ ಹೊಳೆಯುವೆ.

ವರಷವೂ ಉತ್ಥಾನ ದ್ವಾದಶಿಯಂದು ಸಂಭ್ರಮದಿ  ಪೂಜಿಸುವಳು ಜಯ

ಹರುಷವೂ ಸ್ತುತಿಸಿತ ಬೃಂದೆಯ ಕೃಪಾಕಟಾಕ್ಷದಲಿ  ಮಿಂದು ತಿಳೆಯುವೆ.

ಜಯಶ್ರೀ ಭಂಡಾರಿ.

ಬಾದಾಮಿ. 

No products were found for this query.

ಪ್ರಕಟಣೆಗಾಗಿ ಸಂಪರ್ಕಿಸಿ

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.