ಅಜ್ಞಾನದ ಬೆಳಕು ಹೋಗಲಾಡಿಸಿ
ಜ್ಞಾನದ ಬೆಳಕು ನೀಡಿ ಗೌರವಿಸಿದರು
ಅಹಂ ಅಹಂಕಾರವನ್ನು ತೊಲಗಿಸಿದರು
ಮೇಲು-ಕೀಳು ಎನ್ನದೆ ಬದುಕಿದರು
ಅರಸನಾಗಿ ರೈತರ ಕಷ್ಟ ತಿಳಿದವರು
ಭಕ್ತಿ ಭಂಡಾರಿಯಾಗಿ ಜೀವಿಸಿದರು
ಅನುಭವ ಮಂಟಪ ನಿರ್ಮಿಸಿದರು
ಜಗತ್ತಿಗೆಲ್ಲ ಸಂದೇಶ ಸಾರಿದರು
ಕಾಯಕದಲ್ಲಿ ನಿಷ್ಠೆಗೌರವ ಬೆಳೆಸಿದವರು
ಅಂತರ್ಜಾತಿ ವಿವಾಹ ಮಾಡಿದರು
ಸಮಾನತೆಯ ಹರಿಕಾರರಾಗಿ ಬೆಳೆದರು
ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾದರು
ಬೂತಿಯಲ್ಲಿ ಶಿವನನ್ನು ಕಂಡವರು
ಶಿವಶರಣೆಯನ್ನು ಗೌರವಿಸಿದರು ಇವರು
ವಚನ ಬರೆಯುವುದರಲ್ಲಿ ಮೊದಲಿಗರು
12ನೇ ಶತಮಾನದ ವಿಶ್ವಗುರು ಬಸವಣ್ಣನವರು
ಮಹಾಂತೇಶ ಎಸ್ ಖೈನೂರ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ