ಸಮಾಜ ಸುಧಾರಣೆಯ ಹರಿಕಾರ
ಸಮಾನತೆಯ ತತ್ವ ಬೋಧಿಸಿದ ಧೀರ
ಕಾಯಕವೇ ಕೈಲಾಸವೆಂದ
ತನ್ನ ವಚನಗಳಿಂದಲೇ ಜನ ಮನ ಗೆದ್ದ
ಬಡವ ಬಲ್ಲಿದ ಮೇಲು ಕೀಳು ಭಾವನೆ ಇಲ್ಲ
ಮೂಢನಂಬಿಕೆಯ ಬಿಟ್ಟು ಮೇಲೆ ಬನ್ನಿ ಎಲ್ಲಾ
ದಯೆಯಿರಲಿ ಸಕಲ ಜೀವಿಗಳಲ್ಲಿ ಎಂದನಲ್ಲ
ಅನುಭವ ಮಂಟಪ ಸ್ಥಾಪಿಸಿದನಲ್ಲ
ಮಾನವೀಯತೆಯ ಮೆರೆದ ಮಹಾನುಭಾವ
ಭಕ್ತಿ ಭಂಡಾರಿ ಬಸವಣ್ಣ ದೇವರ ಸ್ವರೂಪ
ಸಾಮಾಜಿಕ ತಾರತಮ್ಯ, ಜಾತಿ ವ್ಯವಸ್ಥೆ ,
ಶೋಷಣೆ ವಿರುದ್ಧ ಸಮರ ಸಾರಿದ ನಿಜ ದೈವ
ವಚನ ಸಾಹಿತ್ಯಕ್ಕೆ ಇವರ ಕೊಡುಗೆ ಅಪಾರ
ಕೂಡಲಸಂಗಮದೇವ ಆರಾಧ್ಯ ದೈವನ ನಂಬಿದ ಶರಣ
ವಿಶ್ವಗುರು ಜಗಜ್ಯೋತಿ ಬಸವಣ್ಣ
ಸಾರ್ಥಕ ಬಾಳಲ್ಲಿ ಸದ್ಭಾವನೆಯ ಬೀಜ ಬಿತ್ತಿ,
ತಿಮಿರ ಕಳೆದ ಬೆಳಕು ನೀಡಿದ ನಮ್ಮ ಬಸವಣ್ಣ
ಉಷಾ ಪ್ರಶಾಂತ್
ಸಿದ್ದಾಪುರ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
-
-
-
- Sale! Add to basket
- ಕವನ ಸಂಕಲನ (Poetry Collection)
Hallu muri
- Original price was: ₹150.00.₹140.00Current price is: ₹140.00.



