ಮರದ ಗೋಳು
ಯಾವ ಜನ್ಮದ ಶತ್ರುವೋ ದೇವರು ಕ್ರೂರಿಯಾದ ನನ್ನನ್ನೊಂದು ನಿಂತಲ್ಲೇ ನಿಲ್ಲುವ ಮರವಾಗಿಸಿದ ಕಡಿದರೂ ಕೆರೆದುಕೊಳ್ಳಲು ಕೈಗಳಿಲ್ಲದಂತೆ ಮಾಡಿದ ಬಡಿದರೂ ತಿರುಗಿ ಬೀಳದಂತೆ ಮೂಕನಾಗಿಸಿದ ಹಾರುವ ಹಕ್ಕಿಗಳು ಬಂದು ಕೂತರು ಸುಮ್ಮನಿರುವೆ ಮೈಮೇಲೆಲ್ಲ ಗೂಡು ಕಟ್ಟಿದರುಾ ಮೌನಿಯಾಗಿರುವೆ ಹಣ್ಣುಗಳಿಗೆ ಕಲ್ಲು ಹೊಡೆದರೂ ಸಹನೆಯಿಂದಿರುವೆ…