ಸ್ವಾಂತಂತ್ರ್ಯ ಸಿಕ್ಕಿದೆ
ಕೆಂಪು ಕೋಟೆಯ ತುದಿಯ ಮೇಲೆ
ಬೀದಿಯಲ್ಲಿ ಉಳಿದುಕೊಂಡ ಸಾಮಾನ್ಯ
ಬಡವ ಮಾತ್ರ ಯಾಕೋ ಅದನ್ನು ಒಪ್ಪುತ್ತಿಲ್ಲ
ಸ್ವಾತಂತ್ರ್ಯ ಸಿಕ್ಕಿದೆ
ಆಡಳಿತದ ಕಛೇರಿಯ ಕಟ್ಟೆಯ ಮೇಲೆ
ಆಡಳಿತದ ಅವಕಾಶ ಸಿಗದ ಸಾಮಾನ್ಯ
ಜನರು ಮಾತ್ರ ಯಾಕೋ ಅದನ್ನು ಒಪ್ಪುತ್ತಿಲ್ಲ
ಸ್ವಾತಂತ್ರ್ಯ ಸಿಕ್ಕಿದೆ
ಶಾಲಾ ಕಾಲೇಜು ಧ್ವಜ ಸ್ತಂಭದ ಮೇಲೆ
ಅಕ್ಷರ ಕಲಿಯುವುದಕ್ಕೆ ಶುಲ್ಕವನ್ನು ಕಟ್ಟುವ
ಕೂಲಿಯವರು ಮಾತ್ರ ಯಾಕೋ ಅದನ್ನು ಒಪ್ಪುತ್ತಿಲ್ಲ
ಸ್ವಾತಂತ್ರ್ಯ ಸಿಕ್ಕಿದೆ
ತ್ರಿವರ್ಣ ಧ್ವಜ ಹಾರಿಸುವ ಆ ಹಗ್ಗಕ್ಕೆ
ಬೆಂಬಲ ಬೆಲೆ ಸಿಗದೆ ಸಾಲಕ್ಕೆ ಕೊರಳು ಕೊಡುವ
ಶ್ರಮದ ರೈತರು ಮಾತ್ರ ಯಾಕೋ ಅದನ್ನು ಒಪ್ಪುತ್ತಿಲ್ಲ
ಸ್ವಾತಂತ್ರ್ಯ ಸಿಕ್ಕಿದೆ
ಬ್ರೀಟಿಷರ ವಿರುದ್ಧ ಹೋರಾಡಿದ ಯೋಧರಿಗೆ
ಹಾಡು ಹಗಲೇ ಅತ್ಯಾಚಾರಕ್ಕೆ ಬಲಿಯಾಗುವ
ಮಹಿಳೆಯರು ಮಾತ್ರ ಯಾಕೋ ಅದನ್ನು ಒಪ್ಪುತ್ತಿಲ್ಲ
ಚಂದ್ರಕಲಾ ಮ ಇಟಗಿಮಠ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ಸವಿತಾ ಮುದ್ಗಲ್ ಅವರ ನೆರಳಿಗಂಟಿದ ಭಾವ ಕವನ ಸಂಕಲನ ಕೃತಿಯ ಪರಿಚಯ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ