ನನ್ನಯ ಹೆಮ್ಮೆಯ ದೇಶ
ಸ್ವಾತಂತ್ರ್ಯ ಭಾರತ ದೇಶ
ತ್ರಿವರ್ಣ ರಾಷ್ಟ್ರದ್ವಜವು
ಅದುವೇ ನಮ್ಮ ಸಂಕೇತವು
ಜನಗಣಮನ ರಾಷ್ಟ್ರಗೀತೆ
ಹಾಡು ನೀ ದೇಶಭಕ್ತಿ ಗೀತೆ
ಸತ್ಯಮೇವ ಜಯತೇ
ವಾಕ್ಯದಲ್ಲಿದೆ ಪೂಜ್ಯತೆ
ರಾಷ್ಟ್ರಪ್ರಾಣಿಯದು ಹುಲಿ
ನೋಡಿ ಧೈರ್ಯವನ್ನು ಕಲಿ
ರಾಷ್ಟ್ರ ಪಕ್ಷಿಯು ನವಿಲು
ಸಂತಸದಲಿ ನೀ ನಲಿಯಲು
ಹಣ್ಣುಗಳ ರಾಜನೆಂದು
ರಾಷ್ಟ್ರೀಯ ಹಣ್ಣು ಮಾವಾಗಿಹುದು
ಕೆಸರಲಿ ಹುಟ್ಟಿದ ಚೆಲುವು
ಕಮಲವದು ರಾಷ್ಟ್ರ ಹೂವು
ರಾಷ್ಟ್ರ ಪಿತಾಮಹರೆನಿಸಿದವರು
ಚರಕದ ಮಹಾತ್ಮಗಾಂಧಿಯವರು
ರಾಷ್ಟ್ರದ ಭಾಷೆಯಾಗಿಹುದು
ಹಿಂದಿ ಕಲಿತರೆ ಹೆಮ್ಮೆಯದು
ಗೊತ್ತೇ ರಾಷ್ಟ್ರೀಯ ತಿಂಡಿಯು
ತಿಂದು ನೋಡು ಆ ಜಿಲೇಬಿಯು
ಮಿಂದು ನೀ ಪಾವನವಾಗು
ಗಂಗಾನದಿಯಲಿ ಪುಣ್ಯವಾಗು
ರಾಷ್ಟ್ರದ ಮಹಾನ್ ಗ್ರಂಥ
ಭಗವದ್ಗೀತೆಯು ಕಂದ
ಆನೆಯೆಂಬ ಪ್ರಾಣಿಯು
ರಾಷ್ಟ್ರೀಯ ಸಸ್ತನಿಯು
ರಾಷ್ಟ್ರೀಯ ಕ್ರೀಡೆಯು
ಹಾಕಿ ಪಂದ್ಯದ ಆಟವು
ರಾಷ್ಟ್ರ ಘೋಷಣೆಯ ಕೂಗು
ಭೋಲೋ ಭಾರತ್ ಮಾತಾಕಿ
ಓಂ ರಾಷ್ಟ್ರ ಮಂತ್ರವನ ಪಠಿಸು
ಝಂಡಾ ಉಂಚಾ ಹೇಳುತ ಧ್ವಜವನ್ನಾರಿಸು
ದೇವನಾಗರಿ ಲಿಪಿಯನು ಅಭಿನಂದಿಸು
ವಂದೇ ಮಾತರಂ ಹೇಳಿ ದೇಶಕೆ ವಂದಿಸು
ನಳಿನಾ ದ್ವಾರಕನಾಥ್
ಬೆಂಗಳೂರು
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
-
-
- Sale! Add to basket
- ಕಥೆಗಳು (Stories)
Edeya Hanate
- Original price was: ₹250.00.₹245.00Current price is: ₹245.00.