You are currently viewing ಶಿಕ್ಷಕರ ದಿನಾಚರಣೆ

ಶಿಕ್ಷಕರ ದಿನಾಚರಣೆ

ಶಿಕ್ಷಕರು ನಾವು ಸಂಬಳಕ್ಕಾಗಿ ದುಡಿಯುತ್ತಿಲ್ಲ.
ವಿದ್ಯಾರ್ಥಿಗಳ ಪ್ರೀತಿ ಮುಂದೆ ಸಾಟಿ ಇಲ್ಲ.
ತರಗತಿಯೊಳಗೆ ಪ್ರೀತಿಯ ಶಿಷ್ಯರು ಇವರೆಲ್ಲ.
ತರಗತಿಯಾಚೆ ನಲ್ಮೆಯ ಸ್ನೇಹಿತರೆಲ್ಲ.

ಬಿದ್ದಾಗಲೂ, ಎದ್ದಾಗಲೂ ಸಂಭ್ರಮಿಸುವೆವು.
ಸೋತಾಗಲೂ, ಗೆದ್ದಾಗಲೂ ಬೀಗಿದೆವು.
ಮಕ್ಕಳ ಮುಂದೆ ನೋವುಮರೆತೆವು.
ಕೀಟಲೆ ಕೊಟ್ಟೂರು ಮತ್ತೆ ಕರೆದು ಕಲಿಸಿದೆವು.

ಹೊಡೆದು ಬೈದರೂ ಬಾಯ್ ಎನ್ನುವರು.
ಹಿಂದಿನ ಕಹಿ ನೆನೆಯದವರು.
ಇವರೇ ನಮ್ಮ ಮುದ್ದು ಶಿಷ್ಯರು.
ನಮ್ಮಮೂರುಹೊತ್ತಿನತುತ್ತಿಗೆಕಾರಣರಾದವರು.

ತತ್ವಜ್ಞಾನಿಯಂತೆ ಮಾರ್ಗದರ್ಶಕರು.
ಜ್ಞಾನದ ಹಸಿವು ನೀಗಿಸುವರು.
ಅಜ್ಞಾನದಅಂಧಕಾರದೂಡಿಸುಜ್ಞಾನದ ಬೆಳಕ ನೀಡುವರು
ನೋವಿನಲ್ಲಿಯೂ ನಗುವುದ ಕಲಿಸುವರು.

ವಕೀಲರಂತೆ ಮಾತನಾಡುವರು
ವಿಜ್ಞಾನಿಯಂತೆ ಯೋಚಿಸುವರು
ಪತ್ತೇದಾರಿಯಂತೆ ಗಮನಿಸುವರು
ನ್ಯಾಯಾಧೀಶನಂತೆ ನಿರ್ಧರಿಸುವರು.

ಶ್ರೀಮತಿ ಮಲ್ಲಮ್ಮ ವಡ್ಡರ
ಕನ್ನಡ ಭಾಷಾ ಶಿಕ್ಷಕರು
ಸರ್ಕಾರಿ ಆದರ್ಶ ವಿದ್ಯಾಲಯ ಅನಂತನಹಳ್ಳಿ ಹರಪನಹಳ್ಳಿ