You are currently viewing ಸಮಾಜ ಸುಧಾರಕ ಶಿಕ್ಷಕ ಮಕ್ಕಳ ಪಾಲಿನ ರಕ್ಷಕ

ಸಮಾಜ ಸುಧಾರಕ ಶಿಕ್ಷಕ ಮಕ್ಕಳ ಪಾಲಿನ ರಕ್ಷಕ

ಶಿಕ್ಷಕರಿಗೊಂದು ನನ್ನ ನಮನ
ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು 💐💐

ಅಂಧಕಾರ ಓಡಿಸಿ ಜ್ಞಾನದ ದೀವಿಗೆ ಹೊತ್ತಿಸಿದವರು
ತಪ್ಪಿದಾಗ ಮಾತಲ್ಲೇ ಶಿಕ್ಷಿಸಿ ಕ್ಷಮಿಸಿದವರು
ಅಕ್ಕರೆಯಿಂದ ಅಕ್ಷರ ಕಲಿಸಿದವರು
ಶ್ರೇಷ್ಠ ವ್ಯಕ್ತಿಗಳ ವಿಚಾರಧಾರೆ ತಲೆಗೆ ತುಂಬಿಸಿದವರು
ಬೋಧನೆ ಮೂಲಕ ಸಾಧನೆಯ ದಾರಿ ತೋರಿದವರು

ನಮ್ಮ ಶ್ರೇಯೋಭಿವೃದ್ಧಿಯ ಹರಿಕಾರರಾದವರು
ಪೋಷಕರಂತೆ ಪ್ರೀತಿ ತೋರಿದವರು
ಸ್ನೇಹಿತರಂತೆ ಸ್ನೇಹ ಭಾವದಲ್ಲಿ ಜೊತೆಗೂಡಿದವರು
ನುಡಿಯೊಂದಿಗೆ ಉತ್ತಮ ಮಾನವೀಯ ಮೌಲ್ಯ ಬೋಧಿಸಿದವರು
ಪ್ರತಿ ಸೋಲಲ್ಲೂ ಗೆಲುವಿನ ಭರವಸೆ ಮೂಡಿಸಿದವರು

ತಮ್ಮ ಕನಸನ್ನು ವಿದ್ಯಾರ್ಥಿಗಳ ಮೂಲಕ ನನಸಾಗಿಸಲು ಪ್ರಯತ್ನಿಸಿದವರು
ಎಂದೂ ಬತ್ತದ ಆತ್ಮವಿಶ್ವಾಸಕ್ಕೆ ನೀರೆರೆದು ಪೋಷಿಸಿದವರು
ತಾವು ತಿಳಿದ ವಿಷಯ ಹಂಚುವ ತವಕದಲ್ಲಿರುವವರು
ಸ್ವಂತ ಮಕ್ಕಳಂತೆ ಸಾಕಿ ಸಲಹುತ್ತಾ ಅಕ್ಷರಧಾರೆಯೆರೆದವರು
ಸನ್ನಡತೆ,ಸಚ್ಚಾರಿತ್ರ್ಯ ಬೆಳೆಸಿದವರು

ಪುಸ್ತಕ ಪ್ರೇಮಿಯಾಗಲು ಪ್ರೇರೇಪಿಸಿದವರು
ಬರವಣಿಗೆಗೆ ಮಾರ್ಗದರ್ಶಕರಾದವರು
ಸದಾ ಜ್ಞಾನದ ಹಸಿವನ್ನು ತಣಿಸಿ ಹಸಿರಾಗಿಸಿದವರು
ಒಟ್ಟಾರೆ ಜೀವನದ ಪ್ರತಿ ಕ್ಷಣದಲ್ಲೂ ಉಸಿರಾದವರು
ಜ್ಞಾನದ ಬೆಳಕ ನೀಡಿ ಬಾಳು ಬೆಳಗಿದವರು

ಇವರ ಬಗ್ಗೆ ಹೇಳಲು ಬೇರೆ ಪದ ಬೇಕೆ?
ಗುರು ಎಂದರೆ ಅಷ್ಟೇ ಸಾಕೇ???

ನಮನಗಳೊಂದಿಗೆ

ಶ್ರೀಮತಿ ಉಷಾ ಪ್ರಶಾಂತ್
ಸಿದ್ದಾಪುರ, ಉತ್ತರ ಕನ್ನಡ ಜಿಲ್ಲೆ,
9741417226


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.