You are currently viewing ಸಾಹಿತ್ಯದ ಖಣಿ ಕುವೆಂಪು

ಸಾಹಿತ್ಯದ ಖಣಿ ಕುವೆಂಪು

ಕನ್ನಡ ನಾಡಿನಲಿ——-
ಪುಣ್ಯದ ಬೀಡಿನಲಿ—-
ಜನಿಸಿದ ಸಾಹಿತ್ಯದ ಖಣಿ
ಕುವೆಂಪು ಅವರ ಧ್ವನಿ .

ಹಳ್ಳವಾಗಿ ನದಿಯಾಗಿ
ಸಮುದ್ರದಂತೆ ಬೆಳೆದರು
ಸಾಹಿತ್ಯ ಸರಸ್ವತಿಯ
ಮುಡಿಯಲ್ಲಿ ಮೆರೆದವರು.

ಮುತ್ತಿನ ಅಕ್ಷರವ ಆಯ್ದು
ಶಬ್ದಭಂಡಾರದ
ಖಜಾನೆ ತುಂಬಿದ
ಮೇರು ಪರ್ವತರು.

ಸಾಹಿತ್ಯದ ಮಜಲುಗಳಲ್ಲಿ
ಅರಳಿದ ಹೂ ಗಳಾಗಿ
ನೇರಳಾದ ಬದುಕಿನಲ್ಲಿ
ಸುಗಂಧದ ಸುವಾಸನೆ
ಹಂಚದರೂ ಹರಡಿದರೂ.

ಯುವ ಬರಹಗಾರರಿಗೆ
ನವ ಸಾಹಿತಿಗಳಿಗೆ
ಸ್ಪೂರ್ತಿಯ ಶೇಲೆಯಾದರು
ಸಾಹಿತ್ಯದ ನದಿಯಾಗಿ
ನರನಾಡಿಯಲಿ ಹರಡಿದವರು.

ಕುಪ್ಪಳ್ಳಿಯ ಸುಪುತ್ರ
ಕನ್ನಡಮ್ಮನ ರತ್ನ
ಜ್ಞಾನ ಪೀಠ ಪುರಸ್ಕೃತರು
ಕುವೆಂಪು ಪ್ರಥಮರು
ಕನ್ನಡಿಗರ ಹೆಮ್ಮೆಯ ರತ್ನ
ನಾಡಿನ ಸಾಹಿತ್ಯ ರತ್ನ.

ಸಂಜಯ ಜಿ ಕುರಣೆ
ಐನಾಪೂರ ತಾ .ಕಾಗವಾಡ ಜಿ.ಬೆಳಗಾವಿ
ಮೊಬೈಲ್. 9663065992

ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.