You are currently viewing ಸಾಧಕಿ ಸಾವಿತ್ರಿ ಬಾಯಿ ಪುಲೆ

ಸಾಧಕಿ ಸಾವಿತ್ರಿ ಬಾಯಿ ಪುಲೆ

1831ರಲ್ಲಿ ಮಹಾರಾಷ್ಟ್ರ ಸತಾರ ಜಿಲ್ಲೆಯಲ್ಲಿವರು
ನೈಗಾಂನ್ ಎಂಬ ಊರಿನಲ್ಲಿ ಜನ್ಮವನು ತಳೆದವರು
ತಂದೆ ನೇವಸೆ ಪಾಟಿಲ ತಾಯಿ ಲಕ್ಷ್ಮೀ ಬಾಯಿಯವರು
ಅಕ್ಷರದ ಅವ್ವ ಸಾವಿತ್ರಿ ಬಾಯಿ ಪುಲೆಯೆಂದು ಕರೆವರು

ದೇಶದ ಮೊದಲ ಶಿಕ್ಷಕಿಯೆಂದು ಹೆಸರು ಗಳಿಸಿದವರು
ಆಧುನಿಕ ಶಿಕ್ಷಣದ ತಾಯಿ ಶಿಕ್ಷಕಿ ಸಂಚಾಲಕಿಯಿವರು
ಸಾಮಾಜಿಕ ಮಹಿಳಾ ಹಕ್ಕುಗಳ ಹೋರಾಟಗಾರರು
ಸರಳ ವೇಷ ಭೂಷಣ ಖಾದಿ ಸೀರೆಯನುಟ್ಟವರು

ವಿದ್ಯೆ ಕಲಿಯದಿದ್ದವರು ಪಶುಗಳಿಗೆ ಸಮವೆಂದವರು
ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಭದ್ರ ಬುನಾದಿ ಹಾಕಿದವರು
ಜಾತಿ-ಭೇಧ ಲಿಂಗ ತಾರತಮ್ಯವನ್ನು ಅಲ್ಲಗಳೆದವರು
8ನೇ ವಯಸ್ಸಿಗೆ ಬಾಲ್ಯ ವಿವಾಹವಾಗಿ ಬಾಳಿದವರು

ಸಗಣಿ ಕೆಸರು ನೀರು ಎರಚಿದರೂ ಬೇಸರಿಸದವರು
ಆದರ್ಶನಾರಿ ದಿಟ್ಟ ಶಿಕ್ಷಕಿಯ ನೆನೆಯೋಣನಾವೆಲ್ಲರು
ನಮ್ಮ ದೇಶದ ಹೆಮ್ಮೆಯ ಸತ್ಯ ಶೋಧಕಿಯಿವರು
ಸಾವಿತ್ರಿಬಾಯಿಪುಲೆಯವರ 193ನೇ ಜನ್ಮ ದಿನವಿಂದು
ಆಚರಿಸುವ ಬನ್ನಿ ಒಗ್ಗೂಡಿ ನಾವೆಲ್ಲರೂ ಇಂದು

ಪೂರ್ಣಿಮಾ ರಾಜೇಶ್
ಬೆಂಗಳೂರು


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.