You are currently viewing ರಥಸಪ್ತಮಿ

ರಥಸಪ್ತಮಿ

ಬಾನಂಗಳದಿ ರಾರಾಜಿಸುವ ದಿನಕರನಿವನು
ಕತ್ತಲೆ ಕಳೆದು ಜಗಕೆ ಬೆಳಕನ್ನು ನೀಡುವನು
ಸಪ್ತ ಅಶ್ವಗಳನ್ನೇರಿ ಬರುವ ಸಾರಥಿಯಿವನು
ನವಗ್ರಹಗಳಿಗೆ ಅಧಿಪತಿ ಸೂರ್ಯ ದೇವನು

ಎಕ್ಕದ ಎಲೆಯ ಶಿರದಲ್ಲಿಟ್ಟು ಮೀಯಬೇಕು
ಸಕಲ ಜೀವರಾಶಿಗೆ ಎಳೆಬಿಸಿಲು ಬೀಳಬೇಕು
ಸಕಲ ಚರ್ಮ ರೋಗ ವ್ಯಾಧಿಗಳ ನಿವಾರಕನು
ಸೂರ್ಯಕೋಟಿ ಸಮಪ್ರಭ ಜ್ಯೋತಿ ಬಾಸ್ಕರನು

ಬ್ರಹ್ಮ ವಿಷ್ಣು ಮಹೇಶ್ವರ ತ್ರಿಮೂರ್ತಿ ಅಂಶದವನು
ರಜತ ರಥದಲ್ಲಿ ಆಸೀನನಾಗಿ ಕಂಗೊಳಿಸುವನು
ಸಪ್ತಮಿಯ ಶುಭದಿನ ಪಥವ ಬದಲಾಯಿಸುವನು
ರಥಸಪ್ತಮಿ ದಿನ ಭಕ್ತರ ಕೋರಿಕೆ ನೆರವೇರಿಸುವನು

ಆದಿತ್ಯ ಹೃದಯ ಸ್ನೋತ್ರಕ್ಕೆ ಒಲಿಯುವವನು
ಎಣ್ಣೆ ಬತ್ತಿ ಇಲ್ಲದೆ ಬೆಳಕು ನೀಡುವ ದೇವನಿವನು
ಪೂರ್ವಕ್ಕೆ ಉದಯಸಿ ಪಶ್ಚಿಮಕ್ಕೆ ಮುಳುಗುವನು
ನೂರಾ ಎಂಟು ಬಾರಿ ನಮಸ್ಕರಿಸಿದರೆ ಅಸ್ತುಎನ್ನುವವನು

ಪೂರ್ಣಿಮಾ ರಾಜೇಶ್


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ