ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು
ಶ್ರಾವಣ ಮಾಸದಿ ಬರುವ
ರಕ್ಷೆಯ ಬಂಧನ ಬೆಸೆಯುವ
ಅಣ್ಣ ತಂಗಿಯರ ವಾತ್ಸಲ್ಯದಿ
ಸಹೋದರತ್ವ ಬೆಳೆಸುವ
ಪ್ರೀತಿ ವಾತ್ಸಲ್ಯ ನಂಬಿಕೆ ಬೆಸೆದು
ಭಾವಾಂತರಂಗದಿ ಭ್ರಾತೃತ್ವ ಬೆಳೆದು
ಶ್ರೀರಕ್ಷೆಯ ಬೇಡತಲಿ
ಹರಸಿರಿ ಮುಕ್ತ ಮನವ ತೆರೆದು
ಸಾರ್ಥಕ ಗೊಳ್ಳಲಿ ರಕ್ಷಾಬಂಧನದ ಸುದಿನ
ಇಮ್ಮಡಿಗೊಳ್ಳಲಿ ಭಾವಗಳ ಬಂಧನ
ಅಕ್ಕರೆಯ ಭಾವ ಮೈದೋರಿ
ಕಂಗೊಳಿಸಲಿ ಮನೆಯಂಗಳದ ತೋರಣ
ಸಹೋದರನೇ ನಿನ್ನಯ ಜೀವನ
ದೀಪ ಬೆಳಗಿದಂತೆ ಬೆಳಗಲಿ
ಸದಾ ಕಾಲ ಸಂತಸ ತುಂಬಿರಲಿ
ಆಯುಷ್ಯ ಗಟ್ಟಿಯಾಗಿ
ಬಾಂಧವ್ಯದ ದಾರ ರಕ್ಷೆಯಾಗಿರಲಿ
ಉಷಾ ಪ್ರಶಾಂತ್
ಸಿದ್ದಾಪುರ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.