ಪುತಲೀ ಬಾಯಿ ಕರಮಚಂದರ ಕಂದ
ಅಹಿಂಸೆಯಲೇ ದೇಶಕ್ಕೆ ಸ್ವಾತಂತ್ರ್ಯ ತಂದ
ತಾ ಹಿಡಿದ ಹಠವಾ ಪೂರೈಸಲೆಂದೇ ಕುಳಿತ
ನಮ್ಮ ನಾಡಿಗೆ ಹೆಮ್ಮೆ ರಾಷ್ಟ್ರಪಿತ
ಪ್ರೀತಿ ಇದ್ದಲ್ಲಿ ಜೀವನವಿದೆ ಎಂದು ತಿಳಿಸಿ
ಒಗ್ಗಟ್ಟೇ ಮಹಾ ಅಸ್ತ್ರ ಎಂಬುದು ಕಲಿಸಿ
ಮಾಡು ಇಲ್ಲವೇ ಮಡಿ ಎಂದು ಎಚ್ಚರಿಸಿ
ದೇಶಕ್ಕಿದ್ದ ಉಸಿರಿಗೆ ಭರವಸೆಯನಿಟ್ಟವರು
ಸತ್ಯ ಶಾಂತಿ ಅಹಿಂಸೆಯ ಪಾಠವ ಬಾಲ್ಯದಲ್ಲಿ ಕಲಿತರು
ದಂಡಿ ಯಾತ್ರೆ ಅಸಹಕಾರ ಚಲೇಜಾವದಲ್ಲಿ ಅಳವಡಿಸಿದರು
ಎದುರಾದವರೇ ಇವರ ಗುಣಗಳಿಗೆ ಸೋತರು
ಸ್ವತಂತ್ರ ತಂದರು, ಸ್ವತಂತ್ರ ಭಾರತದ ರಾಷ್ಟ್ರಪಿತರು
ನಾತುರಾಮ್ ಗೋಡ್ಸೆ ರವರ ಗುಂಡಿಗೆ ಗುರಿಯಾಗಿ
ಪರಮಾತ್ಮನಲ್ಲಿ ಲೀನವಾದ ಹುತಾತ್ಮ
ಭಾರತ ದೇಶದ ಪ್ರತಿ ಮನೆಗಳಲ್ಲೂ ಮನಗಳಲ್ಲೂ
ಪರಮಾತ್ಮನೇ ಆದ ಮಹಾತ್ಮಾ
ಪವಿತ್ರಾ
ಕೆ ಎಲ್ ಇ ಸಂಸ್ಥೆಯ ಬಿ ಎಫ್ ಟಿ ವಿಭಾಗದಲ್ಲಿ
ಪ್ರಥಮ ವರ್ಷದ ಪದವಿ ಶಿಕ್ಷಣ
ಬೆಳಗಾವಿ