You are currently viewing ಪುನೀತ್ ಎಂಬ ರತ್ನ

ಪುನೀತ್ ಎಂಬ ರತ್ನ

ವಿಷಯ: ಕನ್ನಡಿಗರ ಕಣ್ಣಲ್ಲಿ ಪುನೀತ್ ರಾಜಕುಮಾರ್

ರಾಜ್ ಪಾರ್ವತಿಯರ ಮುದ್ದಿನ ಪುತ್ರ
ಚಂದನವನದ ಹೆಮ್ಮೆಯ ರಾಜರತ್ನ
ಕನ್ನಡಿಗರ ಹೃದಯದ ಕರ್ನಾಟಕ ರತ್ನ
ಅಭಿಮಾನಿಗಳಲ್ಲಿ ವಿರಾಜಮಾನ ಯುವರತ್ನ

ಎಳವೆಯಲ್ಲೇ ಉತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ
ಗಂಧದಗುಡಿಯ ಎಲ್ಲರ ಮನದ ಚಿರ ಆಸ್ತಿ
ರಾಷ್ಟ್ರ ಮಟ್ಟದಲ್ಲಿ ತಂದರು ಕನ್ನಡಕೆ ಕೀರ್ತಿ
ಮಾನವತೆಯ ಮೇರುಪರ್ವತ ಸಾಕಾರಮೂರ್ತಿ

ನೇತ್ರದಾನದಿ ಅಂಧರಿಗೆ ಬೆಳಕಾಗಿ
ಸಂಭಾವನೆ ರಹಿತ ರಾಯಭಾರಿಯಾಗಿ
ದಾನವ ಮಾಡಲು ಎಲ್ಲರಿಗೂ ಸ್ಫೂರ್ತಿಯಾಗಿ
ಸಮಾಜಮುಖಿ ಕಾರ್ಯಗಳಿಗೆ ಮಾದರಿಯಾಗಿ

ಆದರೆ ಪುನೀತನಂತಾಗಬೇಕು ಜೀವನ
ಉಸಿರಿಲ್ಲದಾಗಲು ಹೆಸರಿರಬೇಕು ಅನುದಿನ
ಇರುವುದನ್ನು ಹಂಚಿ ಇಲ್ಲದವರಿಗೆ ಬೆಳಕಾಗಿ
ಇರಬೇಕು ಎಲ್ಲರ ಮನದಲ್ಲಿ ನೆನಪಾಗಿ

ಅಕ್ಕರೆಯ ಸಂಭ್ರಮದ ಮಾತುಗಾರ
ಅದ್ಭುತ ನಟನೆಯ ರಾಜಕುಮಾರ
ಕಾಣದಂತೆ ನೀಡಿದ ಕೊಡುಗೈ ದಾನಶೂರ
ಅಪ್ಪುವಾದರು ಅಜರಾಮರ ಅಮರ

ಆಶಾ ಎಲ್ ಎಸ್
ಶಿವಮೊಗ್ಗ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.