You are currently viewing ಪೂಜ್ಯ ಶ್ರೀ ಸಿದ್ದೇಶ್ವರರ ಕುರಿತ ಹೈಕುಗಳ ನಮನ

ಪೂಜ್ಯ ಶ್ರೀ ಸಿದ್ದೇಶ್ವರರ ಕುರಿತ ಹೈಕುಗಳ ನಮನ

೧.
ಸಿದ್ದನಾದನು
ಮಾಹೆ ಪೊರೆ ಕಳಚಿ,
ಬುದ್ಧನಾದಂತೆ.
೨.
ಕಿಸೆಯಲ್ಲದ
ಅಂಗಿ ಧರಿಸಿ ಆತ
ಸನ್ಯಾಸಿಯಾದ !
೩.
ಬಯಲು ಹೂತ್ತಿ
ಬಿತ್ತಿದ ಜ್ಞಾನ ಯೋಗಿ,
ಬೆಳಗು ಸೂರ್ಯ.

ಪ್ರಕೃತಿಯಲಿ
ಭಗವಂತನ ರೂಪ:
ತೋರಿದ ಸಂತ.

ಹೂವಿನಲ್ಲಿಯೂ
ತತ್ವಜ್ಞಾನದ ಸಾರ
ಬೀರಿದ ಜ್ಞಾನಿ.

ಸಂಬಂಧಗಳ
ತೊರೆದು ಜ್ಞಾನ ಜ್ಯೋತಿ
ಹೊತ್ತಿಸಿದಾತ.
೭.
ಮಾತು ಸರಳ
ಎಲ್ಲಾ ದ್ವಂದ್ವಗಳಿಗೂ
ತಾಸು ವಿರಾಮ.

ಮಾತಿನಲ್ಲಿಯೆ
ಜಗದ ನಿಯಮವ
ದರ್ಶಕನೀತ.

ಕೀರ್ತಿಕಳಚಿ
ಮಣ್ಣಿನ ಮೋಹ ಬಿಟ್ಟು;
ಬಯಲಪ್ಪಿದ

೧೦
ಮತಧರ್ಮದ
ನಂಟಿಗಂಟಿಕೊಳ್ಳದಿ
ಸಿದ್ಧೇಶ್ವರರು.

ಗಂಗಾಧರ ಅವಟೇರ
ಶ್ರೀ ಮಹೇಶ್ವರ ಪ.ಪೂ.ಕಾಲೇಜು ಇಟಗಿ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.