ಭೂಮಿ ಗಾಳಿ ಬೆಳಕು ನೆಲ ಜಲ
ನಮಗೆ ನಿಸರ್ಗ ಕೊಟ್ಟ ಉಚಿತ ಫಲ
ನಾವು ಕಾಪಾಡಬೇಕು ಜೀವ ಸಂಕುಲ
ಇಲ್ಲದಿದ್ದರೆ ಆಗುವದು ಕೋಲಾಹಲ
ಮನೆಯಲ್ಲೊಂದು ಮಗುವಿನ ಹುಟ್ಟು
ಮಗುವಿಗಾಗಿ ಒಂದು ಮರವ ನೆಟ್ಟು
ಮರ ಕಡಿದು ಮಾಡದಿರೋಣ ರಟ್ಟು
ಅದುವೇ ನಮ್ಮ ಉಸಿರಾಟದ ಗುಟ್ಟು
ಪ್ರಕೃತಿ ಮಾತೇ ನಿನ್ನದೆಂತಹ ಅದ್ಭುತ ಸೃಷ್ಟಿ
ಮಾನವ ನಿರ್ಮಿತವಲ್ಲದ ನಿನ್ನ ಒಡಲವೃಷ್ಠಿ
ಅಣು ರೇಣು ತೃಣ ಕಾಸ್ಟಿಗೆ ಉದರ ಪುಷ್ಠಿ
ಮಣ್ಣ ಕಣಕಣದಿ ಮೆರೆದಾಡುವೆ ನೀನೇ ಅದೃಷ್ಟಿ
ಇಳೆಗೆ ಮಳೆಯಾಗಿ ಧರೆಗಿಳಿದಿರುವಿ
ಕೊಳೆಯು ಒಡಲೊಳಗೆ ತುಂಬಿಕೊಳ್ಳುವಿ
ಸುಳಿವ ತಂಗಾಳಿಯು ಜಗಕೆ ಸೂಸುವಿ
ಬಿಸಿಲಿಗೆ ಬೆಂದು ಬಾಂದಳದಿ ಬೆರೆಯುವಿ
ಮಾಡೋಣ ಗಿಡಮರಗಳ ಪೋಷಣೆಯು
ಮಣ್ಣಿನ ಸವಕಳಿಯಿಂದ ಸಂರಕ್ಷಣೆಯು
ಶುಕ-ಪಿಕ ತರುಲತೆಗಳ ಉಪಚರಣೆಯು
ಆಗ ಸ್ವಾರ್ಥಕ ಪರಿಸರ ದಿನಾಚರಣೆಯು
ಶಿವಲೀಲಾ ಎಸ್ ಧನ್ನಾ
ಜವಳಿ (ಡಿ) ಜಿಲ್ಲಾ ಕಲ್ಬುರ್ಗಿ.
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.