You are currently viewing ಒಂಚೂರು ಬದುಕಿನ ದರ್ದೂ ಹನಿಸು

ಒಂಚೂರು ಬದುಕಿನ ದರ್ದೂ ಹನಿಸು

ಬೆಳದಿಂಗಳ ಸೊಬಗನ್ನು ಕಣ್ತುಂಬ
ಸವಿ ಮೋಹದ ಆಸೆ ತೋರಿಸಿ
ಚಂದ್ರನ ತಟ್ಟೆಗೆ ಕೈ ಹಾಕದಿರು.

ನಾ ಬದುಕುವ ಬದುಕು
ಕಾಡುಮಲ್ಲಿಗೆಯಾದರೂ ಘಮ
ಬೀರದೆ ಇರಲಾರೆ ನಾ ನಡೆವ ಹಾದಿ ಮುಳ್ಳೇ
ಆದರೂ ಗಮ್ಯಸ್ಥಾನವನ್ನು ಮುಟ್ಟದೇ ಇರಲಾರೆ

ನಾ ಹರಿವ ನದಿ
ನನ್ನ ರಭಸಕ್ಕೆ ಆಣೆಕಟ್ಟು ಕಟ್ಟದಿರು
ಅನ್ನ ಕಂಡೊಡನೆ ಬಯಸಿ ಬಯಸಿ
ತಿನ್ನುವ ಸೊಣಗನಾಗಲಾರೆ

ಹಾದರದ ನುಡಿಯನಾಡಿಸಿ
ನನ್ನೆದೆಯ ಪದವ ಕದಿಯಲಾರೆ
ನನ್ನೆದೆಯ ಪದಗಳಿಗೆ
ನಿಮ್ಮೆದೆ ಹಾಳಾಗದಿರಲಿ

ಮೋಹಿಸಿದವರಿಗೆ ಒಲಿಯುವ
ಕೃಷ್ಣನಂತಾಗುತ್ತಿದ್ದರೆ ಊರ್ತುಂಬ
ರಾಧೆಯರಿರುತ್ತಿದ್ದರು ಬದುಕು ಸುಟ್ಟ ಕಲೆಗಳಿಗೆ
ಮುಲಾಮು ಹಚ್ಚಿದ ಕೈಗಳಿಗೆ ಒಲಿಯುವೆ ನಾನು

ಬರೀ ಶೃಂಗಾರವನ್ನೇ ಹನಿಸಿ
ಶೃಂಗಾರದ ಶೂಲಕ್ಕೇರಿಸಬೇಡ
ಒಂಚೂರು ಬದುಕಿನ ದರ್ದೂ
ಹನಿಸು ಮತ್ತೆ ಎದುರಾಗಬೇಡ

ನನ್ನದು ಶರೀಫ ದಾರಿ
ಒಗಟಿನಂತ ಒರಟು ಮಾತು
ರಾತ್ರಿಕೊಳದ ಚಂದ್ರನ ಬಿಂಬದಂತೆ
ಅಲ್ಲಿ ಕಲ್ಲೊಗೆದು ರಾಡಿ ಮಾಡದಿರು

ಆರೋಪಿ ಎಂದ ಮಾತ್ರಕ್ಕೆ ಅಪರಾಧಿಯಾಗುತ್ತೇನೆಯೇ
ಇಲ್ಲಿ ಸಂಯಮ ಕಳೆದುಕೊಂಡಿದ್ದು ಸಮಯ ನಾನಲ್ಲ …

ದಾವಲಸಾಬ
ಸಂಶೋಧನಾ ವಿದ್ಯಾರ್ಥಿ
ಡಾ.ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠ
ಕ.ವಿ.ವಿ, ಧಾರವಾಡ
ಮೊ.9743608020


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.