You are currently viewing ಓ ಮಳೆಯೇ ನೀ ನಿಲ್ಲದಿರು

ಓ ಮಳೆಯೇ ನೀ ನಿಲ್ಲದಿರು

ಓ ಮಳೆಯೇ ನೀ ನಿಲ್ಲದಿರು
ನಿನ್ನ ಹನಿಗಳ ರಾಶಿಯ
ಬರಸೆಳೆದು ಮುತ್ತನೀಯುವ
ಮಹಾದಾಸೆಯು ಬುವಿಗೆ

ಓ ಮಳೆಯೇ ನೀ ನಿಲ್ಲದಿರು
ನಿನ್ನ ಆಲಾಪದ ಗುಂಗಿನಲಿ
ನಿನ್ನೊಡನೆ ಮೈ ಮರೆತು
ನರ್ತಿಸುವ ಮಹಾದಾಸೆ
ಮಯೂರಿಗೆ

ಓ ಮಳೆಯೇ ನೀ ನಿಲ್ಲದಿರು
ನೀ ಬರುವ ವೇಳೆಯಲಿ
ಮಣ್ಣಿನ ಸುಗಂಧವನ್ನು
ಹೀರುತ ತನ್ಮಯಳಾಗುವ
ಮಹಾದಾಸೆ ನನಗೆ

ಓ ಮಳೆಯೇ ನೀ ನಿಲ್ಲದಿರು
ಸುಯ್ಯನೆ ಸುರಿಯುವ ನಿನ್ನ
ಜಲ ಧಾರೆಯಲಿ
ಕಾಗದ ದೋಣಿಯ ತೇಲಿ
ಬಿಡುವ ಮಹಾದಾಸೆ ಚಿಣ್ಣರಿಗೆ

ಓ ಮಳೆಯೇ ನೀ ನಿಲ್ಲದಿರು
ಮನದ ಗೊಂದಲ ದೂರವಿರಿಸಿ
ತುಸು ಹೊತ್ತು ಮೈ ಚೆಲ್ಲಿ
ಕುಣಿದು ಕುಪ್ಪಳಿಸುವ
ಮಹಾದಾಸೆ ಜಲಚರಗಳಿಗೆ

ಓ ಮಳೆಯೇ ನೀ ನಿಲ್ಲದಿರು
ಧರೆಯ ಒಡಲನ್ನು ಹದಗೊಳಿಸಿ
ಉತ್ತಿ ಬಿತ್ತಿ ಸಂಭ್ರಮ ಪಡುವ
ಮಹಾದಾಸೆಯು ನಮ್ಮ
ನೇಗಿಲ ಯೋಗಿಗೆ

ಓ ಮಳೆಯೇ ನೀ ನಿಲ್ಲದಿರು
ನಿನಗೆ ನಾ ಸೋತು
ನನ್ನ ಪದಗಳಿಗೆ ಜೀವವ
ತುಂಬಿ ಕವಿತೆಯೊಂದನು
ಕಟ್ಟುವ ಮಹಾದಾಸೆ ನನಗೆ

ರೇಣುಕಾ ಶಿವಕುಮಾರ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ನಮ್ಮ ಇಂದಿನ ಸುಖಿ ಬದುಕು ಬುದ್ಧ ಬಾಬಾಸಾಹೇಬರು ನೀಡಿದ ಭಿಕ್ಷೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ