You are currently viewing ನೆರಳು

ನೆರಳು

ನಮ್ಮಯ ನೆರಳೊಂದೆ ಸದಾ ಜೊತೆಗಿಹುದು
ಕತ್ತಲಾದರೆ ಕಾಣದಾಗ ಕಪ್ಪನೆಯ ನೆರಳದು
ಎಲ್ಲಾ ವರ್ಗದ ಮನುಷ್ಯನಿಗೂ ಕಾಣುವುದು
ಒಂದೇ ಬಣ್ಣದಲ್ಲಿ ಶ್ರೇಷ್ಠವೆಂದು ಸಾರುತಿಹುದು

ಅರುಣೋದಯದಿ ಮೂಡಿದೆ ರವಿಕಿರಣವು ಭುವಿಗೆ
ಎಷ್ಟೊಂದು ಲಂಬವಿದೆ ಮುಂಜಾನೆಯ ನೆರಳಿಗೆ
ಬಿರುಬಿಸಿಲ ಧಗೆಯಲಿ ಹುಡುಕುತ ಮರದ ನೆರಳಿಗೆ
ಧನ್ಯವಾದ ತಂಪನೆರೆದು ಪೋಷಿಸುವ ಹಸಿರ ಮಾತೆಗೆ

ಕಷ್ಟಕ್ಕೆ ನೆರವಾಗು, ಪ್ರಾಮಾಣಿಕ ವ್ಯಕ್ತಿತ್ವದ ಸಾಲಿನಲಿ
ಆಪತ್ತಿಗೆ ಆಸರೆಯಾಗು ದಯಾಧಾಕ್ಷಿಣ್ಯ ತೋರುತಲಿ
ಒಂಟಿಯಾದರು ಮರುಗಬೇಡ ಸಮಾಜದ ನಡೆಯಲಿ
ಸದಾಕಾಲ ಜೊತೆಗೆ ಇರುವುದು ನಿನ್ನಿ ಆತ್ಮವಿಸ್ವಾಸದಲಿ

ಹೊಂಗೆ ಮರವಾದರೇನು? ಅರಳಿ ಮರವಾದರೇನು?
ಹಗಲಿನಲಿ ತೋರುವುದು ಒಂದೇತರ ನೆರಳಲ್ಲವೇನು?
ಹೆಣ್ಣು &ಗಂಡಾದರೇನು?ಬಾಳಿನಲ್ಲಿ ಸಮವಲ್ಲವೇನು?
ಪ್ರಕೃತಿಯ ಸೊಬಗಿನ ಮುಂದೆ ಎಲ್ಲ ಗೌಣವಲ್ಲವೇನು?

ಧನ್ಯವಾದಗಳು

ಸವಿತಾ ಮುದ್ಗಲ್
ಗಂಗಾವತಿ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.