ನೆನೆಯಬೇಕು ಗಾಂಧೀಜಿ-ಶಾಸ್ತ್ರೀಜಿಯವರನು
ಭರತಭೂಮಿ ನೆನೆಯಬೇಕು ಈ ಮಹಾತ್ಮರನು
ಸ್ವಾತಂತ್ರ್ಯಕೆ ಹೋರಾಡಿದ ಗಾಂಧೀಜಿಯನು
ಪ್ರಾಮಾಣಿಕತೆಗೆ ಹೆಸರಾದ ಶಾಸ್ತ್ರೀಯವರನು
ಸತ್ಯ ಅಹಿಂಸೆಯೇ ಗಾಂಧೀಜಿಯ ಧ್ಯೇಯವಾಕ್ಯ
ಜೈ ಜವಾನ್ ಜೈ ಕಿಸಾನ್ ಶಾಸ್ತ್ರಿಯವರ ಘೋಷವಾಕ್ಯ
ಖಾದಿತೊಟ್ಟು ಮಾಡಿದರು ಉಪವಾಸ ಸ್ವಾತಂತ್ರ್ಯಕೆ
ಸೋಮವಾರ ಉಪವಾಸವಿಟ್ಟರು ಆಹಾರದ ಹಾಹಾಕಾರಕೆ
ಸ್ವಾತಂತ್ರ್ಯದ ನೇತಾರರಿವರುಗಳು
ಭವ್ಯ ಭಾರತದ ರೂವಾರಿಗಳಿವರು
ಗಾಂಧೀಜೀ ಮಹಾತ್ಮರಾದರು
ಶಾಸ್ತ್ರೀಜಿ ಅಮರರಾದರು
ದೇಶದ ಸ್ವಾತಂತ್ರ್ಯದ ಕನಸು ಕಂಡರು ಗಾಂಧೀಜಿ
ಸ್ವರಾಜ್ಯದ ಕನಸು ಕಂಡರು ಶಾಸ್ತ್ರೀಜಿ
ಸ್ವದೇಶಿ ವಸ್ತುಗಳಿಗೆ ಮುಂಚೂಣಿಯಾದರು
ದಿಟ್ಟತನದ ನಿರ್ಧಾರಗಳಿಗೆ ಹೆಸರಾದರು
ಭವ್ಯ ಹಿಂದೂರಾಷ್ಟ್ರಕೆ ದುಡಿದ
ಈ ನೇತಾರರನ್ನು ನೆನೆಯಬೇಕು ಅನುದಿನ
ರಾಮರಾಜ್ಯದ ಕನಸು ಸ್ವಚ್ಛ ಭಾರತದ
ಕನಸು ನನಸಾಗಲು ನೆನೆಯಬೇಕು
ಆಶಾ ಶ್ರೀಧರ್ ಎಲ್.ಎಸ್
(ಶಂಕರಘಟ್ಟ). ಶಿವಮೊಗ್ಗ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.