You are currently viewing ನಾರಿ

ನಾರಿ

ವಿಶ್ವ ಮಹಿಳಾ ದಿನದ ಶುಭಾಶಯಗಳು

ಜೀವನದ ಆರಂಭ ನಾರಿ, ಜೀವನದ ಅಂತ್ಯವು ನಾರಿ
ತಾಯಿ, ಮಗಳು, ಹೆಂಡತಿ ಪ್ರತಿರೂಪದ ರೂವಾರಿ

ನವಮಾಸ ಒಂದು ಜೀವವನ್ನು ಹೊತ್ತಳು ತಾಯಿ
ಹೊಸ ಪ್ರಪಂಚವನ್ನು ಪರಿಚಯಿಸಿದಳು ದಯಾಮಯಿ

ಪ್ರೀತಿ, ಮಮತೆ, ವಾತ್ಸಲ್ಯ ಎಂದರೆ ಹೆಣ್ಣು
ಹೆಣ್ಣು ಮನೆ ಮತ್ತು ಸಂಸಾರದ ಕಣ್ಣು

ಅಕ್ಕ-ತಂಗಿಯ ಸ್ಥಾನದಲ್ಲಿಯು ಸಿಗುವುದು ತಾಯಿಯ ಪ್ರೀತಿ
ಕೊನೆವರೆಗೂ ಹೆಂಡತಿಯ ರೂಪದಲ್ಲಿ ಸಿಗುವಳು ಸಂಗಾತಿ

ಮಗಳಾಗಿ ಮನೆಯ ದೀಪವಾಗಿ ಬೆಳಗಿಸುವಳು, ನಾರಿ
ಸೊಸೆಯಾಗಿ ಮನೆಯನ್ನು ಸಿಂಗರಿಸುವಳು, ಸುಕುಮಾರಿ

ತಾಯಿಯ ಪ್ರೀತಿ, ಮಮತೆ, ಪ್ರತಿಯೊಂದು ಜೀವಿಯಲ್ಲಿ
ಮಹಾಮಾತೆಯನ್ನು ದೇವರೆಂದು, ಪೂಜಿಸುವೆವು ಈ ಸಂಸಾರದಲ್ಲಿ

ಭೊಲೋಕದ ಜೀವಂತ ದೇವತೆ ತಾಯಿಯು, ನಾರಿ
ಸಕಲ ಜೀವಿಗಳಿಗೂ ಜೀವ ತುಂಬುವಳು ಕರುಣಾಮಯಿ.

ಸ್ನೇಹದ ಲೋಕದಲ್ಲಿ ಸಿಗುವಳು ಗೆಳತಿಯು, ನಾರಿ
ತಪ್ಪಿದಾಗ ಬಯ್ದು ಬುದ್ಧಿ ಹೇಳುವ ಒಡತಿಯು, ನಾರಿ

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೆಚ್ಚೆದೆಯ ರಾಣಿಯರ ಸಿಟ್ಟು
ಬ್ರಿಟಿಷರು ಓಡಿ ಹೋದರು ಭಾರತ ದೇಶವ ಬಿಟ್ಟು

ಕಲ್ಪನಾ, ಬಚೇಂದ್ರಿ, ಗೀತಾ, ಮುಂತಾದವರು ದೇಶದ ಹೆಮ್ಮೆಯ ನಾರಿಯರು
ತಮ್ಮ ಸಾಧನೆಯಿಂದ ಭಾರತ ದೇಶದ ಕೀತಿಯನ್ನು ಜಗತ್ತಿನಲ್ಲಿ ಸಾರಿದರು.

ಶ್ರೀ. ಶಂಕರ. ಎಮ್. ಕಿಲ್ಲೆಕರ
ದಾಂಡೇಲಿ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.