ಪ್ರಜೆಗಳಿಂದ ಪ್ರಜೆಗಳಿಗಾಗಿ
ಪ್ರಜೆಗಳ ಪ್ರಜಾಪ್ರಭುತ್ವಕ್ಕಾಗಿ
ನಾವು ಪ್ರಜಾ ಸತಾತ್ಮಕವಾಗಿ
ಸದೃಢ ಸರ್ಕಾರ ನಿರ್ಮಿತಕ್ಕಾಗಿ
ಸೂಕ್ತ ನಾಯಕನ ಆಯ್ಕೆಗಾಗಿ
ಮತ ನೀಡೋಣ ದೇಶದ ನಾಗರೀಕರಾಗಿ
ಹಣ ಹೆಂಡ ನೋಟಿನ ಆಮೀಷ ಬೇಡ
ಕುಕ್ಕರ್ ಸೀರೆ ಆಸೆಗೆ ಮತ ನೀಡಬೇಡ
ಸುಳ್ಳು ಆಶ್ವಾಸನೆ ನಂಬಿ ಮೋಸ ಹೋಗಬೇಡ
ಪೊಳ್ಳು ರಾಜಕೀಯದ ದಾಸನಾಗಬೇಡ
ಅನ್ಯಾಯ ಅವ್ಯವಹಾರಕ್ಕೆ ಸೆರೆ ಆಗಬೇಡ
ನ್ಯಾಯಕ್ಕಾಗಿ ನಿನ್ನ ಮತ ನೀಡುವುದು ಮರಿಬೇಡ
ನಾವು ಪ್ರಾಮಾಣಿಕ ಪ್ರಜೆಯಾಗಬೇಕು
ಸುಭದ್ರ ಸರ್ಕಾರಕ್ಕೆ ಅಡಿಪಾಯವಾಗಬೇಕು
ಮೌಲ್ಯ ಆಧಾರಿತ ದೇಶವನ್ನು ಕಟ್ಟಬೇಕು
ವಿಶ್ವವೇ ಮೆಚ್ಚುವ ನಾಯಕನ ಆರಿಸಬೇಕು
ನಿಷ್ಪಕ್ಷಪಾತದಿ ನಾವು ಮತ ನೀಡಬೇಕು
ಒಬ್ಬ ಪ್ರಜೆಯಾಗಿ ದೇಶದ ಋಣ ತೀರಿಸಬೇಕು
ಶಿವಲೀಲಾ ಎಸ್ ಧನ್ನಾ
ಜವಳಿ (ಡಿ) ಜಿಲ್ಲಾ :-ಕಲ್ಬುರ್ಗಿ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.