You are currently viewing ನಮ್ಮ ಬಾವುಟ

ನಮ್ಮ ಬಾವುಟ

ಆಂಧ್ರದ ಪಿಂಗಳಿ ವೆಂಕಯ್ಯನು ವಿನ್ಯಾಸಗೊಳಿಸಿದನು
ಭಾರತೀಯರ ಪ್ರತೀಕವಿದು ತ್ರಿವರ್ಣ ಧ್ವಜಾರೋಹಣವಿದು

22ನೇ ಜುಲೈ 1947ರಂದು ಅಂಗಿಕರಿಸಲಾಯಿತು
ಧಾರವಾಡ ಗರಗದ ಬಟ್ಟೆಯಿಂದ ಧ್ವಜವಾಯಿತು

ಕೆಂಪುಕೋಟೆಯ ಮೇಲೆ ಸದಾ ಹಾರಾಡುವುದು
ನಮ್ಮ ಹೆಮ್ಮೆಯ ಸಂಕೇತವಾಗಿ ಮೆರೆಯುತಿಹುದು

ಸಂಹಿತೆಯಾದಾರದಿ ಧ್ವಜಾರೋಹಣ ಮಾಡಬೇಕು
ಪರೇಡಿನ ವೇಳೆಯಲಿ ಸದಾ ಬಲಗೈಯಲಿರಬೇಕು

ಎಷ್ಟು ಚಂದ ಎಷ್ಟು ಅಂದ ಬಾವುಟ ಭಾರತ ದೇಶದ್ದು
ಮೂರು ಬಣ್ಣದ ಸುಂದರ ಕಣ್ಣೋಟದ ಧ್ವಜವಿದು

ಕೇಸರಿ, ಬಿಳಿ, ಹಸಿರುಬಣ್ಣದ ಮಿಶ್ರಿತವು
ನಡುವೆ ನೀಲಿ ಬಣ್ಣದ ಅಶೋಕ ಚಕ್ರವು

ಕೇಸರಿ ಸಾರುವುದು ಬಲಿದಾನದ ಬದುಕನ್ನು
ಬಿಳಿಬಣ್ಣ ಹೇಳುವುದು ಶಾಂತಿಯ ಸಂಕೇತವನ್ನು

ಹಸಿರು ಬಣ್ಣ ಪ್ರಕೃತಿಯನ್ನು ಸಾರುವುದು
ನೀಲಿಬಣ್ಣದೊಂದಿಗೆ ಇಪ್ಪತ್ನಾಲ್ಕು ಗೆರೆಗಳಿರುವುದು

15ಆಗಸ್ಟ್ ಸ್ವಾತಂತ್ರ್ಯ ದಿನದ ಕಹಳೆಯು ಮೂಡಲು
ದೇಶಭಕ್ತಿಗೆ ನನ್ನೀ ಮನವು ಸದಾ ಮಿಡಿಯುತಿರಲು

ಸವಿತಾ ಮುದ್ಗಲ್
ಬಳ್ಳಾರಿ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಸವಿತಾ ಮುದ್ಗಲ್ ಅವರ ನೆರಳಿಗಂಟಿದ ಭಾವ ಕವನ ಸಂಕಲನ ಕೃತಿಯ ಪರಿಚಯ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ